ಗ್ಯಾರಂಟಿಗಳಿಂದ ಕೊಟ್ಟ ಖುಷಿಯನ್ನು ಮದ್ಯದಂಗಡಿ ಪರವಾನಿಗೆ ಮೂಲಕ ಕಸಿಯದಿರಿ: ಮಹಿಳಾ ಸಂಘಟನೆಗಳ ಮನವಿ

Views: 6
ಗ್ಯಾರಂಟಿಗಳಿಂದ ಕೊಟ್ಟ ಖುಷಿಯನ್ನು ಮದ್ಯದಂಗಡಿ ಪರವಾನಿಗೆ ಮೂಲಕ ಕಸಿಯದಿರಿ: ಮಹಿಳಾ ಸಂಘಟನೆಗಳ ಮನವಿ
”ನೂತನ ರಾಜ್ಯ ಸರಕಾರ ಮಹಿಳೆಯರಿಗೆ ಕೆಲವು ಗ್ಯಾರಂಟಿ ಯೋಜನೆಗಳ ಮೂಲಕ ಖುಷಿ ನೀಡಿತ್ತು. ಆದರೆ ಇದೀಗ ಆ ಖುಷಿಯನ್ನು ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ಮೂಲಕ ಕಸಿಯಲು ಹೊರಟಿರುವುದು ಆಘಾತಕಾರಿ” ಎಂದು ದ.ಕ. ಜಿಲ್ಲೆಯ ಮದ್ಯನಿಷೇಧ ಆಂದೋಲನದಡಿ ಜಿಲ್ಲೆಯ ವಿವಿಧ ಸಂಘಟನೆಗಳ ಮಹಿಳಾ ಪ್ರತಿನಿಧಿಗಳು ರಾಜ್ಯ ಸರಕಾರಕ್ಕೆ ಭಾವನಾತ್ಮಕ ಮನವಿ ಮಾಡಿದ್ದಾರೆ.
ಮಂಗಳೂರಿನ ಪುರಭವನದ ಸಮೀಪದ ರಾಜಾಜೀ ಪಾರ್ಕ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಗಾಂಧಿ ಜಯಂತಿ ಕಾರ್ಯಕ್ರಮದ ಸಂದರ್ಭ ಮಹಿಳಾ ಹೋರಾಟಗಾರರ ಗುಂಪೊಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸಿತು.
”ಯಾವುದೇ ಸರಕಾರ ಮದ್ಯ ಮಾರಾಟದಿಂದ ಬರುವ ಆದಾಯವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವುದು ಅಪರಾಧ ಎಂದು ಗಾಂಧೀಜಿ ಹೇಳಿದ್ದರು. ಆದರೆ ಸರಕಾರ ಅಕ್ರಮ ಮದ್ಯ ಮಾರಾಟ ತಡೆಗಟ್ಟಲು 600 ಗ್ರಾಮ ಪಂಚಾಯತ್ ಸೇರಿದಂತೆ 1000 ಹೊಸ ಮದ್ಯದಂಗಡಿಗೆ ಪರವಾನಿಗೆ ನೀಡುವ ಪ್ರಸ್ತಾವನೆ ಮುಂದಿಟ್ಟಿರುವುದು ತಿಳಿದು ಆಘಾತಗೊಂಡಿದ್ದೇವೆ” ಎಂದು ಮದ್ಯ ನಿಷೇಧ ಆಂದೋಲನ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಯುವ ಮುನ್ನಡೆ ಮಂಗಳೂರು, ಪ್ರಜ್ಞಾ ಸಲಹಾ ಕೇಂದ್ರ, ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ (ಸಿಪಿಐಎಂಎಎಲ್)ಗಳನ್ನು ಒಳಗೊಂಡ ಪ್ರತಿನಿಧಿಗಳು ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
”ಮದ್ಯ ನಿಷೇಧ ಆಂದೋಲನದ ಮಹಿಳೆಯರು 2015ರಿಂದಲೂ ಹೈಕೋರ್ಟ್‌ನ ಆದೇಶದಂತೆ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಅಕ್ರಮ ಮಾರಾಟಗಾರರ ಮೇಲೆ ಕಠಿಣ ಕ್ರಮ ವಹಿಸಬೇಕು.
ಬಿ.ಎಂ. ರೋಹಿಣಿ, ವಿಜಯಲಕ್ಷ್ಮಿ ಬಿ. ಶೆಟ್ಟಿ, ಸ್ವರ್ಣ ಭಟ್, ದೇವಿಕಾ, ಆದಿತ್ಯ ಕೊಲ್ಲಾಜೆ ಅವರನ್ನು ಒಳಗೊಂಡ ನಿಯೋಗ ಸರ್ಕಾರಕ್ಕೆ ಈ ಮನವಿ ಮಾಡಿದೆ.