ರಾಜಕೀಯ

ಗೋ ಬ್ಯಾಕ್ ಶೋಭಾ ಮಾಡುತ್ತಿರುವವರ ಮೇಲೆ ಸಂಸದೆ ಶೋಭಾ ಬಹಿರಂಗ ಸವಾಲು!

Views: 189

ಚಿಕ್ಕಮಗಳೂರು: ಗೋ ಬ್ಯಾಕ್ ಶೋಭಾ ಒಂದು ಸ್ಪಾನ್ಸರ್ಡ್ ಕಾರ್ಯಕ್ರಮವಾಗಿದ್ದು ಒಬ್ಬರ ತೇಜೋವಧೆ, ಅವಮಾನ ಮಾಡಿ ಆಕಾಂಕ್ಷಿಗಳು ಟಿಕೆಟ್ ಕೇಳಬಾರದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ.

ಲೋಕಸಭಾ ಚುನಾವಣೆ ಬಿಜೆಪಿ ಟಿಕೆಟ್ ರೇಸ್‌ನಲ್ಲಿರುವ ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಶೋಭಾ ಮಾಡುತ್ತಿರುವವರ ಮೇಲೆ ಸಂಸದೆ ಶೋಭಾ ಬಹಿರಂಗ ಸವಾಲು ಎಸೆದಿದ್ದಾರೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆಯಾಗಲಿ ಗೋ ಬ್ಯಾಕ್ ಪತ್ರ ಬರೆದಿರುವವರು ನಿಜವಾದ ಬಿಜೆಪಿ ಕಾರ್ಯಕರ್ತರಾ ಎಂದು ಪ್ರಶ್ನಿಸಿರುವ ಅವರು ನಿಷ್ಠಾವಂತ ಕಾರ್ಯಕರ್ತರು ಹೀಗೆ ಮಾಡುವುದಿಲ್ಲ ಎನ್ನುತ್ತಾ ಪರೋಕ್ಷವಾಗಿ ವಿರೋಧ ಪಕ್ಷದ ಕೈವಾಡ ಇರಬಹುದು ಎಂದಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಟಿಕೆಟ್ ಕೇಳಲು ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ಇದೆ, ಆದರೆ ಇನ್ನೊಬ್ಬರ ತೇಜೋವಧೆ ಮಾಡಿ ಅಪಮಾನಿಸಿ ಅನವಶ್ಯಕ ಅಪಪ್ರಚಾರ ಮಾಡಿ ಟಿಕೆಟ್ ಕೇಳಬಾರದು ಎಂದಿದ್ದಾರೆ. ಇದನ್ನೆಲ್ಲಾ ಜನರು ಮತ್ತು ಹೈಕಮಾಂಡ್ ಗಮನಿಸುತ್ತಿದ್ದು, ಇದಕ್ಕೆಲ್ಲ ಉತ್ತರ ಯಾರು ಕೊಡಬೇಕೋ ಅವರೇ ಕೊಡುತ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಗೋ ಬ್ಯಾಕ್ ಕಳೆದ ಬಾರಿಯೂ ನಡೆದಿತ್ತು ರಾಜಕಾರಣದಲ್ಲಿ ಇದೆಲ್ಲ ಇರುವಂತದ್ದೆ ರಾಜಕೀಯಕ್ಕೆ ಬಂದ ಮೇಲೆ ಫೇಸ್ ಮಾಡಬೇಕು ಎನ್ನುತ್ತಾ ಗೋಡೆಗೆ ಬಾಲ್‌ ಹೊಡೆದಷ್ಟು ನಮ್ಮ ಕೈ ಗಟ್ಟಿಯಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

Related Articles

Back to top button