ಗೋವಾ ಬೀಚ್‌ನಲ್ಲಿ ಹೆಂಡತಿಯನ್ನು ನೀರಿನಲ್ಲಿ ಮುಳುಗಿಸಿ ಕೊಲೆ..!

Views: 180
ಗಂಡ ಇದ್ದಕ್ಕಿದ್ದಂತೆ ಕೂಗುತ್ತಾ, ಕಂಡ ಕಂಡವರನ್ನು ಕರೆಯುತ್ತಾ, ಗೋಳಾಡಲು ಶುರುಮಾಡಿದ್ದ. ಸುತ್ತಲಿದ್ದ ಪ್ರವಾಸಿಗರ ಬಳಿ ಹೋಗಿ ‘ನನ್ ಹೆಂಡ್ತಿ ಪ್ರಾಣಬಿಟ್ಟಿದ್ದಾಳೆ. ನನ್ನ ಪತ್ನಿಯ ಜೀವ ಹೋಯ್ತು’ ಅಂತೆಲ್ಲಾ ಕಣ್ಣೀರು ಸುರಿಸುತ್ತಾ ಹುಚ್ಚನಂತೆ ಅಲೆಯಲಾರಂಭಿಸಿದ್ದ.
ಇಳಿಸಂಜೆ ಹೊತ್ತಲ್ಲಿ ಬೀಚ್‌ನಲ್ಲಿ ಹಾಯಾಗಿ ಅಲೆದಾಡುತ್ತಿದ್ದೋರು ಇದ್ದಕ್ಕಿದ್ದಂತೆ ಶಾಕ್‌ಗೆ ಒಳಗಾಗಿದ್ರು. ಏನಾಯ್ತು ಏನಾಯ್ತು ಅಂತ ಪರಸ್ಪರ ಕೇಳೋಕೆ ಶುರುಮಾಡಿದ್ರು. ಅದೇ ವೇಳೆ ದೂರದಲ್ಲೇ ಇದ್ದ ಮತ್ತೊಬ್ಬ ಪ್ರವಾಸಿಗರೊಬ್ರು ಅಲ್ಲಿ ನಡೆಯುತ್ತಿರೋದೆಲ್ಲವನ್ನೂ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಳ್ತಿದ್ರು. ಇತ್ತ ನನ್ನ ಮಡದಿಯ ಪ್ರಾಣ ಹೋಗ್ಬಿಟ್ಟಿದೆ.. ಆಕೆ ಮಾತಾಡ್ತಿಲ್ಲ.. ಉಸಿರಾಡ್ತಿಲ್ಲ ಅಂತ ಕೂಗುತ್ತಾ ಓಡುತ್ತಿರೋದನ್ನ ನೋಡಿ ಗಾಬರಿಗೊಂಡ ಪ್ರವಾಸಿಗರೊಬ್ಬರು ಪತ್ನಿಯ ಶವ ಬಿದ್ದಿದ್ದ ಜಾಗಕ್ಕೆ ಈತನೊಟ್ಟಿಗೆ ಓಡೋಡಿ ಬಂದ್ರು.
ಏನಾಯ್ತು ಅಂತ ಪ್ರವಾಸಿಗರು ಕೇಳಿದ್ದಕ್ಕೆ ನೀರಲ್ಲಿ ಮುಳುಗಿ ಸತ್ತು ಹೋಗಿದ್ದಾಳೆ. ನೀರಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾಳೆ ಅಂತಾ ಹೇಳಿದ್ದ. ತಕ್ಷಣವೇ ಪೊಲೀಸರು ಬಂದ್ರು. ಪೊಲೀಸ್ ಎಂಟ್ರಿ ಬಳಿಕ ಬಯಲಾದ ಸತ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಕಡಲತೀರದ ವಿಹಾರಕ್ಕೆ ಗಂಡನೊಟ್ಟಿಗೆ ಹೆಜ್ಜೆಯಿಟ್ಟಿದ್ದ ಈ ಚೆಲುವೆ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು ಹೇಗೆ? ಈಕೆ ಸಾಯೋ ಸಂದರ್ಭದಲ್ಲಿ ಗಂಡ ಎಲ್ಲಿದ್ದ? ಪತ್ನಿ ಸಮುದ್ರದ ನೀರಲ್ಲಿ ಮುಳುಗಿ ಉಸಿರುಗಟ್ಟುತ್ತಿರೋದನ್ನು ನೋಡಿಯೂ ಗಂಡ ಸುಮ್ಮನೆ ನಿಂತಿದ್ನಾ? ಅಥವಾ ಅಲ್ಲಿ ನಡೆದಿದ್ದೇ ಬೇರೇನಾ? ಅನ್ನೋದು ಪೋಲೀಸರನ್ನು ಕಾಡಿತ್ತು.
ಗೋವಾದ ಕಾಬೋ ದಿ ರಮಾ ಹೆಸರಿನ ಈ ಬೀಚ್‌ನ ಕಲ್ಲುಬಂಡೆಗಳ ನಡುವೆ ಹೆಣವಾಗಿ ಸಿಕ್ಕ ಈ ಚೆಲುವೆ ಹೆಸರು ದೀಕ್ಷಾ ಗಂಗ್ವಾರ್ ಅಂತ. ಜಸ್ಟ್ 27 ವರ್ಷ ವಯಸ್ಸಿನ ಈ ದೀಕ್ಷಾ 2022 ರಲ್ಲಿ ತನ್ನದೇ ಊರಿನ ಈ ಗೌರವ್ ಕಟಿಯಾರ್ ಜೊತೆ ಸಪ್ತಪದಿ ತುಳಿದಿದ್ಲು. ದೀಕ್ಷಾಳ ಗಂಡ ಗೌರವ್ ಹೋಟೆಲ್ ಮ್ಯಾನೇಜಿಂಗ್ ಫೀಲ್ಡ್‌ನಲ್ಲಿ ಕೆಲಸ ಮಾಡುತ್ತಿದ್ದವ. ಚೆನ್ನೈನಲ್ಲಿ ಒಂದಷ್ಟು ವರ್ಷ ಹಲವಾರು ಫೈವ್ ಸ್ಟಾರ್ ಹೋಟೆಲ್‌ಗಳ ಮ್ಯಾನೇಜ್ ಆಗಿ ಕೆಲಸ ಮಾಡಿದ್ದ ಗೌರವ್‌ಗೆ 2 ವರ್ಷಗಳ ಹಿಂದೆ ಗೋವಾದಲ್ಲಿ ಕೆಲಸ ಸಿಕ್ಕಿತ್ತು. ಗೋವಾದ ಈ ಕಾಬೋ ದಿ ರಮಾ ಹೆಸರಿನ ಬೀಚ್‌ಗೆ ಸಮೀಪದಲ್ಲೇ ಇರೋ ಲಕ್ಷುರಿ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಆರಂಭಿಸಿದ್ದ. ಅದಾದ ಕೆಲವೇ ತಿಂಗಳಲ್ಲಿ ಈ ದೀಕ್ಷಾಳನ್ನು ಮದುವೆಯಾಗಿದ್ದ.
ಫೈವ್ ಸ್ಟಾರ್ ಹೋಟೆಲ್‌ಗೆ ಕೆಲಸಕ್ಕೆ ಹೋಗಿ ಸಂಜೆ ವೇಳೆಗೆ ವಾಪಸ್ಸಾಗ್ತಿದ್ದ ಗೌರವ್ ಪತ್ನಿಯನ್ನು ಕರೆದುಕೊಂಡು ಬೀಚ್‌ಗೆ ವಾಕಿಂಗ್‌ಗೆ ಹೋಗ್ತಿದ್ದ. ಗಂಡ ಹೆಂಡತಿ ಬಿಚ್‌ನತ್ತ ಹೆಜ್ಜೆ ಹಾಕಿದ್ದರು.
ಪತ್ನಿ ಕೆಲಸಮಯದ ಬಳಿಕ ಬೀಚ್‌ನ ಕಲ್ಲು ಬಂಡೆಗಳ ನಡುವೆ ಹೆಣವಾಗಿ ಬಿದ್ದಿದ್ದಳು. ‘ಪತ್ನಿ ನೀರಿನಲ್ಲಿ ಮುಳುಗಿದ್ದಾಳೆ.. ಉಸಿರಾಡ್ತಿಲ್ಲ.. ಕೈಲಾಕು ಆಡಿಸ್ತಿಲ್ಲ’ ಅಂತ ಗಂಡ ಹುಚ್ಚನಂತೆ ಓಡುತ್ತಾ ಸುತ್ತಲಿದ್ದ ಪ್ರವಾಸಿಗರನ್ನು ಕೂಗಿ ಕರೆಯಲಾರಂಭಿಸಿದ್ದ. ಬಂದು ನೋಡಿದ್ರೆ ಪತ್ನಿ ಕಡಲ ತೀರದಲ್ಲಿ ಹೆಣವಾಗಿದ್ಲು. ಕಲ್ಲು ಬಂಡೆಗಳ ನಡುವೆ ದೀಕ್ಷಾಳ ಶವ ಬಿದ್ದಿತ್ತು. ಇದೆಲ್ಲವೂ ದೂರದಲ್ಲಿದ್ದ ಪ್ರವಾಸಿಗರೊಬ್ಬರ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿತ್ತು.
ಗೋವಾ ಪೊಲೀಸರು ಸ್ಥಳಕ್ಕೆ ಬಂದು ದೀಕ್ಷಾಳ ಶವನನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಗಂಡನನ್ನು ಕರೆದುಕೊಂಡು ಹೋಗಿ ವಿಚಾರಣೆ ಆರಂಭಿಸಿದ್ದರು. ನಾನು ಕೆಲಸ ಮುಗಿಸ್ಕೊಂಡು ಮನೆಗೆ ಬಂದು ಪತ್ನಿಯನ್ನು ಕರೆದುಕೊಂಡು ಬೀಚ್‌ಗೆ ಬಂದಿದ್ದೆ. ಪತ್ನಿ ಬೀಚ್‌ನಲ್ಲಿ ಕಲ್ಲುಬಂಡೆ ಮೇಲೆ ಕುಳಿದು ನೀರಿನೊಟ್ಟಿಗೆ ಆಟವಾಡುತ್ತಿರುವಾಗ ಕೆಳಗೆ ಬಿದ್ದಿದ್ದಾಳೆ. ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾಳೆ ಅಂತ ಗಂಡ ಹೇಳಿಕೆ ನೀಡಿದ್ದ. ಆದ್ರೆ, ಗಂಡನ ಹೇಳಿಕೆ ಪೊಲೀಸರಿಗೆ ಸಮಾಧಾನ ತಂದಿರಲಿಲ್ಲ. ಆತನ ಹೇಳಿಕೆ ಕೇಳಿ ಪೊಲೀಸರಿಗೆ ಶಂಕೆ ಹುಟ್ಟಿತ್ತು.
ಆ ಸಮಯಕ್ಕೆ ಸರಿಯಾಗಿ ಪೊಲೀಸರ ಕೈಗೆ ಎರಡು ವಿಡಿಯೋಗಳು ಸಿಕ್ಕಿದ್ದವು. ಆ ವಿಡಿಯೋಗಳಲ್ಲಿ ದೀಕ್ಷಾಳ ಸಾವಿನ ಹಿಂದಿನ ಸುಳಿವು ಸಿಕ್ಕಿತ್ತು. ಆ ವಿಡಿಯೋಗಳನ್ನು ತೋರಿಸಿದಾಕ್ಷಣ ಪತಿ ಗೌರವ್ ಗಾಬರಿಗೊಳಗಾದ. ತಲೆ ಮೇಲೆ ಹೊಡೆದಂತೆ ಮಾತನಾಡ್ತಿದ್ದವ ಇದ್ದಕ್ಕಿದ್ದಂತೆ ತಡಬಡಾಯಿಸಲು ಶುರು ಮಾಡಿದ್ದ. ಅದೇ ವೇಳೆಗೆ ದೀಕ್ಷಾಳ ಮರಣೋತ್ತರ ಪರೀಕ್ಷೆ ಕೂಡ ಹೊರಬಿದ್ದಿತ್ತು. ದೀಕ್ಷಾ ಆಕಸ್ಮಿಕವಾಗಿ ಮುಳುಗಿಲ್ಲ ಯಾರೋ ಬಲವಂತಾಗಿ ಆಕೆಯನ್ನು ನೀರಿನಲ್ಲಿ ಮುಳುಗಿಸಿದ್ದಾರೆ ಅಂತ ಪೋಸ್ಟ್‌ಮಾರ್ಟಂ ರಿಪೋರ್ಟ್‌ನಲ್ಲಿ ಉಲ್ಲೇಖವಾಗಿತ್ತು. ದೀಕ್ಷಾಳದ್ದು ಆಕಸ್ಮಿಕ ಸಾವಾಗಿರಲಿಲ್ಲ. ಅದೊಂದು ಕೊಲೆಯಾಗಿತ್ತು.
ಗಂಡನ ಮುಖವಾಡ ಕಳಚಿಬಿದ್ದಿದೆ. ಪೊಲೀಸರೆದುರು ಪಾಪಿ ಪತಿರಾಯ ತಪ್ಪೊಪ್ಪಿಕೊಂಡಿದ್ದಾನೆ