ಜನಮನ

ಗೃಹಲಕ್ಷ್ಮಿ ನೋಂದಣಿಗೆ ಹಣ ಪಡೆದವರ ಮೇಲೆ ಕ್ರಿಮಿನಲ್ ಕೇಸ್

Views: 0

ಗೃಹಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಫಲಾನುಭವಿಗಳಿಂದ ಹಣ ಪಡೆದರೆ ಅಥವಾ ಯೋಜನೆ ಅನುಷ್ಠಾನಕ್ಕೆ ನಿರ್ಲಕ್ಷ ತೋರಿದರೆ ಅಂತವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೋಂದಣಿ ಪ್ರಕ್ರಿಯೆಗೆ ಹಣ ಪಡೆಯುತ್ತಿದ್ದ 3 ಕೇಂದ್ರಗಳ ಲಾಗಿನ್ ಐಡಿ ಹಿಂಪಡೆಯಲಾಗಿದೆ. ಯೋಜನೆ ದುರ್ಬಳಕೆ ತಡೆಯಲು ತೀವ್ರ ನಿಗಾವಹಿಸುತ್ತಿದ್ದೇವೆ. ಎಲ್ಲಿಯೇ ಆಗಲಿ ಹಣ ಪಡೆಯುತ್ತಿರುವುದು ಕಂಡು ಬಂದರೆ ತಹಶೀಲ್ದಾರ್, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳ ಗಮನಕ್ಕೆ ತರಬೇಕು ಮತ್ತು ಪೊಲೀಸ್ ಠಾಣೆಗೆ ಮಾಹಿತಿ ಕೊಡಬೇಕು ಎಂದರು.

ಗೃಹಲಕ್ಷ್ಮಿ ಯೋಜನೆ ನೋಂದಣಿ ಉಚಿತವಾಗಿ ಮಾಡಿಕೊಳ್ಳುತ್ತಿಲ್ಲ ಪ್ರತಿ ಅರ್ಜಿ ಅಪ್ಲೋಡ್ ಮಾಡುವವರಿಗೆ ಸರಕಾರದಿಂದಲೇ 12 ರೂಪಾಯಿ ನೀಡುತ್ತಿದ್ದೇವೆ ಹಾಗಾಗಿ ಯಾರು ಹಣ ಕೂಡ ಬೇಕಾಗಿಲ್ಲ ಎಂದರು.

Related Articles

Back to top button