‘ಕ್ಲಿಕ್’ ಸಿನಿಮಾ ಮೂಲಕ ಕುಂದಾಪುರದ ರವಿ ಬಸ್ರೂರು ಪುತ್ರ ‘ಪವನ್’ ಬಣ್ಣದ ಲೋಕಕ್ಕೆ

Views: 77
ಕುಂದಾಪುರದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಪುತ್ರ ಪವನ್ ಬಸ್ರೂರ್ ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ.
ಶಶಿಕುಮಾರ್ ನಿರ್ದೇಶನದ ಕ್ಲಿಕ್ ಎಂಬ ಈ ಚಿತ್ರವು ಮಕ್ಕಳ ಚಲನಚಿತ್ರವಾಗಿದೆ. ಕಾರ್ತಿಕ್, ಸಿಲ್ಲಿ ಲಲ್ಲಿ ಆನಂದ್, ಚಂದ್ರಕಲಾ ಮೋಹನ್, ಸಂಜು ಬಸಯ್ಯ, ಸುಮನಾ, ರಚನಾ ದಶರತ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
16 ವರ್ಷದ ಪವನ್ ತನ್ನ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಈ ಸಂಬಂಧ ಮಾಹಿತಿ ನೀಡಲಾಗಿದೆ. ತನ್ನ ತಂದೆ ರವಿ ಬಸ್ರೂರು ಪೋಸ್ಟ್ ಮಾಡಿದ ವೀಡಿಯೊಗಳ ಮೂಲಕ ಗಮನ ಸೆಳೆದ ಯುವ ಪ್ರತಿಭೆಯಯನ್ನು ನಿರ್ದೇಶಕರು ಸಿನಿಮಾಗೆ ಆಯ್ಕೆ ಮಾಡಿದ್ದಾರೆ.
‘ನಿಮ್ಮಲ್ಲಿರುವ ಪ್ರತಿಭೆ’ ಎಂಬ ಶೀರ್ಷಿಕೆಯನ್ನು ಹೊಂದಿರುವ ಕ್ಲಿಕ್, ಮನೆಯಲ್ಲಿ ನಿರ್ಲಕ್ಷ್ಯವನ್ನು ಎದುರಿಸುವ ಮಕ್ಕಳ ಮನಸ್ಥಿತಿ, ಅವರ ಶೈಕ್ಷಣಿಕ ಹೋರಾಟಗಳು ಮತ್ತು ಅದರಿಂದಾಗುವ ಅಭದ್ರತೆಗಳನ್ನು ಪರಿಶೋಧಿಸುವ ಕಥೆಯಾಗಿದ್ದು, ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಶರಣ್ಯಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಶಶಿಕಿರಣ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ವಿಶ್ವಾಸ್ ಕೌಶಿಕ್ ಸಂಗೀತ ಸಂಯೋಜಿಸಿದ್ದು, ಆಕಾಶ್ ಪರ್ವ ಹಿನ್ನೆಲೆ ಸಂಗೀತವನ್ನು ನಿರ್ವಹಿಸಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ,
ಸಂಗೀತ ನಿರ್ದೇಶಕ ರವಿ ಬಸ್ರೂರ್ ಪುತ್ರ ಪವನ್ ಬಸ್ರೂರು ನಾಯಕನಾಗಿ ಅಭಿನಯಿಸಿರುವ ‘ಕ್ಲಿಕ್’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ನವೀನ್ ಶಂಕರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನ ಪರದೆಯಲ್ಲಿಯೂ ಈ ಟ್ರೇಲರ್ ಬಿಡುಗಡೆಗೊಂಡು ಗಮನ ಸೆಳೆದಿದೆ. ‘ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಕರು ಗುರುತಿಸಬೇಕೆಂದು ಚಿತ್ರದಲ್ಲಿ ತೋರಿಸಿದ್ದಾರೆ. ಒಂದೇ ಸಲಕ್ಕೆ ಇಷ್ಟವಾಗುವ ಟ್ರೇಲರ್’ ಎಂದರು ನವೀನ್ ಶಂಕರ್.
ಶಶಿಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಶಶಿಕಿರಣ್ ಬಂಡವಾಳ ಹೂಡಿದ್ದಾರೆ.