ಇತರೆ

ಕ್ಯಾನ್ಸರ್ ವಾಸಿಯಾಗುತ್ತೆ ನಂಬಿಕೆಯಿಂದ ಐದು ವರ್ಷದ ಬಾಲಕನೊಬ್ಬನನ್ನು ಗಂಗಾ ಸ್ನಾನ ಮಾಡಿಸುವ ವೇಳೆ ಬಾಲಕ ಸಾವು 

Views: 76

ಹೊಸದಿಲ್ಲಿ: ಗಂಗಾಸ್ನಾನ ಮಾಡಿದರೆ ಕ್ಯಾನ್ಸರ್ ವಾಸಿಯಾಗುತ್ತದೆ ಎಂಬ ನಂಬಿಕೆಯಿಂದ ಐದು ವರ್ಷದ ಬಾಲಕನೊಬ್ಬನನ್ನು ಪೋಷಕರು ಗಂಗಾ ಸ್ನಾನ ಮಾಡಿಸುವ ವೇಳೆ ಬಾಲಕ ಸಾವನಪ್ಪಿದ ಘಟನೆ ನಡೆದಿದೆ‌

ಪೋಷಕರು ನೋಡುತ್ತಿರುವಾಗಲೇ ಮಗುವಿನ ಪೋಷಕರು  ಗಂಗೆಯಲ್ಲಿ ಬಾಲಕನನ್ನು ಮುಳುಗಿಸಿದ್ದಾಳೆ. ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ಪ್ರಾಥಮಿಕ ವರದಿಯಲ್ಲಿ ವಿಚಾರ ಬೆಳಕಿಗೆ ಬಂದಿದೆ.

ಹರಿದ್ವಾರದಲ್ಲಿ ಈ ಘಟನೆ ನಡೆದಿದ್ದು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಕನನ್ನು ಆತನ ಪೋಷಕರು ಹಾಗೂ ಚಿಕ್ಕಮ್ಮ ಹರಿದ್ವಾರದ ಗಂಗಾ ನದಿ ಬಳಿಗೆ ಕರೆತಂದಿದ್ದಾರೆ. ಈ ವೇಳೆ ಪೋಷಕರು ನದಿಯ ತಟದಲ್ಲಿ ದೇವರ ಧ್ಯಾನ ಮಾಡುತ್ತಿದ್ದರೆ ಬಾಲಕನ ಚಿಕ್ಕಮ್ಮ ಬಾಲಕನನ್ನು ಗಂಗಾ ನದಿಯಲ್ಲಿ ಕೆಲ ಹೂತ್ತು ಮುಳುಗಿಸಿ ಹಿಡಿದಿದ್ದಾರೆ ಇದನ್ನು ಕಂಡ ಅಲ್ಲಿದ್ದ ಇತರ ಮಂದಿ ಬಾಲಕನನ್ನು ನೀರಿನಿಂದ ಮೇಲೆತ್ತಲು ಹೇಳಿದ್ದಾರೆ ಆದರೆ ಇದಕ್ಕೆ ಒಪ್ಪದ ಚಿಕ್ಕಮ್ಮ ಮತ್ತೆ ನೀರಿನಲ್ಲಿ ಮುಳುಗಿಸಿ ಹಿಡಿದಿದ್ದಾರೆ ಇದರಿಂದ ಸಿಟ್ಟಿಗೆದ್ದ ಅಲ್ಲಿದ್ದ ಮಂದಿ ಬಾಲಕನನ್ನು ನೀರಿನಿಂದ ಮೇಲಕ್ಕೆ ಎತ್ತಿದ್ದಾರೆ ಈ ವೇಳೆ ಬಾಲಕನ ಚಲನವಲನ ನಿಂತು ಹೋಗಿದೆ. ಕೂಡಲೇ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟೋತ್ತಿಗಾಗಲೇ ಬಾಲಕನ ಪ್ರಾಣಪಕ್ಷಿ ಹಾರಿಹೋಗಿತ್ತು.

ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕನ ಪೋಷಕರು, ಹಾಗೂ ಚಿಕ್ಕಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Related Articles

Back to top button