ಕರಾವಳಿ
ಕೋಟ ಪಡುಕರೆಯಲ್ಲಿ ಭವಾಬ್ಧಿ ಕಡಲೂರ ಸನ್ಮಾನಕ್ಕೆ ರವಿ ಕಟಪಾಡಿ ಆಯ್ಕೆ

Views: 42
ಕೋಟ: ಕೋಟತಟ್ಟು ಪಡುಕರೆಯಲ್ಲಿಇದೇ ಬರುವ ಮಾಚ್೯ 2 ರಂದು ಟೀಮ್ ಭವಾಬ್ಧಿ ಪಡುಕರೆಯ ಆಶ್ರಯದಲ್ಲಿ ನಡೆಯಲಿರುವ ಸಾಂಸ್ಕೃತಿಕ ಪರ್ವ ಕಡಲೂರ ಸನ್ಮಾನಕ್ಕೆ ಸಮಾಜಸೇವಕ ರವಿ ಕಟಪಾಡಿ ಆಯ್ಕೆಯಾಗಿದ್ದಾರೆ.
ಕೋಟತಟ್ಟು ಪಡುಕರೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ರವಿ ಕಟಪಾಡಿ ಈ ಸನ್ಮಾನ ಸ್ವೀಕರಿಸಲಿದ್ದಾರೆ.ವಿಶೇಷ ಅಭಿನಂದನೆಗೆ ಯಕ್ಷರಂಗದ ಶ್ರೇಷ್ಠ ಕಲಾವಿದ ಕೋಟ ಸುರೇಶ್,ಯುವ ಕೃಷಿಕ ಸುದಿನ ಕೋಡಿ, ಅಂತಾರಾಷ್ಟ್ರೀಯ. ಯುವ ಕಲಾವಿದ ನಾಗೇಶ್ ಆಚಾರ್ ಕೋಟ ಭಾಜನರಾಗಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಸಲುವಾಯ ‘ಅಪ್ಪೆ ಮಂತ್ರದೇವತೆ’ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ.ಎಂದು ಸಂಘಟಕರು ತಿಳಿಸಿದ್ದಾರೆ.