ಕೋಟ: ಅಚ್ಲಾಡಿ ಇಂಜಿನಿಯರಿಂಗ್ ವಿದ್ಯಾರ್ಥಿ ಮುಂಬೈಯಲ್ಲಿ ನಡೆದ ಅಪಘಾತದಲ್ಲಿ ಸಾವು

Views: 295
ಕೋಟ: ಇಲ್ಲಿಗೆ ಸಮೀಪ ಅಚ್ಲಾಡಿಯ ಇಂಜಿನಿಯರಿಂಗ್ ವಿದ್ಯಾರ್ಥಿ 15 ದಿನಗಳ ಹಿಂದೆ ಮುಂಬೈಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಮುಂಬೈ ಆಸ್ಪತ್ರೆಯಲ್ಲಿ ನಿಧನರಾದರು
ಮೃತಪಟ್ಟ ವಿದ್ಯಾರ್ಥಿ ಅನ್ವಿಶ್ (19) ಕಾವಡಿ ವರದರಾಜ್ ಶೆಟ್ಟಿ ಮತ್ತು ಅಚ್ಲಾಡಿಯ ಲತಾ ಶೆಟ್ಟಿ ಅವರ ಪುತ್ರ
ಗೋವ ರತ್ನಗಿರಿಯಲ್ಲಿ ರೈಲ್ವೆ ಉದ್ಯೋಗಿಯಾಗಿದ್ದ ವರದರಾಜ್ ಶೆಟ್ಟಿ, ಅವರ ಪುತ್ರ ಅನ್ವಿಶ್ ಮುಂಬೈಯಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, 15 ದಿನಗಳ ಹಿಂದೆ ತನ್ನ ಮಾವನ ಮನೆಯಿಂದ ರಾತ್ರಿ ಊಟ ಮುಗಿಸಿ ಕೊಂಡು ಬೈಕ್ ನಲ್ಲಿ ವಾಪಾಸು ಬರುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ, ಗಂಭೀರ ಗಾಯಗೊಂಡ ಆತನನ್ನು ಮುಂಬೈ ಆಸ್ಪತ್ರೆಗೆ ಸೇರಿಸಲಾಯಿತು. ಜೀವನ್ಮರಣ ಸ್ಥಿತಿಯಲ್ಲಿದ್ದ ಅನ್ವಿಶ್ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ. ನಾಳೆ ಬುಧವಾರ ಮಧುವನ ಅಚ್ಲಾಡಿಯಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.