ಕೋಟೇಶ್ವರ: ಮಾರ್ಕೋಡು ಸಮೀಪ ಬೋನಿನಲ್ಲಿ ಸೆರೆಯಾದ ಚಿರತೆ

Views: 170
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಮಾರ್ಕೋಡು ಸಮೀಪ ಗುಡ್ಡೆಶಾಲೆ ಅಂಗನವಾಡಿ ಬಳಿ ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ವಕ್ವಾಡಿ, ಕಟ್ಕೆರೆ, ಕಾಂತಾವರ, ಹೂವಿನಕೆರೆ, ಉಳ್ತೂರು, ಕೆದೂರು ಮಾಲಾಡಿ ಪರಿಸರದಲ್ಲಿ ನಿರಂತರವಾಗಿ ಸಾಕು ನಾಯಿ, ದನ ಕರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ, ಮನುಷ್ಯರ ಮೇಲಿನ ದಾಳಿಗೆ ಹೆದರಿದ ಜನರು ಕತ್ತಲಾಗುತ್ತಾ ಮನೆಯಿಂದ ಹೊರಗೆ ಹೋಗಲು ಹೆದರುತ್ತಿದ್ದರು. ಬೆಳಿಗ್ಗೆ ವಾಕಿಂಗ್ ಹೋಗುದನ್ನು ನಿಲ್ಲಿಸಿದ್ದರು.
ಚಿರತೆ ಓಡಾಟ ಕೇಳಿಬಂದ ಹಿನ್ನೆಲೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳೀಯರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಗುಡ್ಡೆ ಶಾಲೆಯ ಆಯಕಟ್ಟಿನ ಸ್ಥಳದಲ್ಲಿ ಬೋನಿರಿಸಿತ್ತು. ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬೋನಿಗೆ ಬೀಳುತ್ತಿದ್ದಂತೆ ಸೆರೆಸಿಕ್ಕ ಚಿರತೆಯನ್ನು ನೋಡಿದ ಗ್ರಾಮಸ್ಥರು ಅರಣ್ಯ ಇಲಾಖೆಯವರನ್ನು ಅಭಿನಂದಿಸಿದರು
ಶುಕ್ರವಾರ ಬೆಳಗ್ಗೆ ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಭೇಟಿ ನೀಡಿ ಚಿರತೆಯನ್ನು ವನ್ಯಜೀವಿ ಅಭಯಾರಣ್ಯಕ್ಕೆ ಬಿಟ್ಟರು. ಕುಂದಾಪುರ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಉಪವಲಯ ಅರಣ್ಯಾಧಿಕಾರಿ ವಿನಯ್ ಜಿ., ಗಸ್ತು ಅರಣ್ಯ ಪಾಲಕರಾದ ಮಾಲತಿ, ಅಶೋಕ್, ಅರಣ್ಯ ವೀಕ್ಷಕ ಸೋಮಶೇಖರ್ ಹಾಗೂ ಸ್ಥಳೀಯರು ಕಾಯಾಚರಣೆಯಲ್ಲಿ ಭಾಗವಹಿಸಿದ್ದರು.