ಜನಮನ

ಕೋಟೇಶ್ವರ:ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಮೂಡುಗೋಪಾಡಿ ಪ್ರಭಾಕರ್ ಶೆಟ್ಟಿ ನಿಧನ

Views: 764

ಕನ್ನಡ ಕರಾವಳಿ ಸುದ್ದಿ: ಸಮಾಜ ಸೇವಕ,ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ, ಉದ್ಯಮಿ, ಮೂಡುಗೋಪಾಡಿ ಪ್ರಭಾಕರ್ ಶೆಟ್ಟಿ (65) ಅವರು ಮೇ 28ರಂದು ಹೃದಯಾಘಾತದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ರೋಟರಿ ವಲಯ 1ರ ಅಸಿಸ್ಟೆಂಟ್ ಗವರ್ನರ್ ಆಗಿ, ಕೋಟೇಶ್ವರ ರೋಟರಿ ಕ್ಲಬ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ವಕ್ವಾಡಿ ಗಣೇಶ್‌ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಮಾಲಕರಾಗಿದ್ದರು. ಮೂಡುಗೋಪಾಡಿಯ ನಾಗಬೊಬ್ಬರ್ಯ ದೇವಸ್ಥಾನದ ಸಮಿತಿ ಅಧ್ಯಕ್ಷರಾಗಿ, ವಕ್ವಾಡಿ ಹಾಲು ಡೈರಿಯಲ್ಲಿ ಅಧ್ಯಕ್ಷರಾಗಿಯೂ  ಸ್ಥಳೀಯ ಬಿಜೆಪಿ ನಾಯಕರಾಗಿದ್ದ ಅವರು ಗೋಪಾಡಿ ಗ್ರಾ.ಪಂ. ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು ಹಾಗೂ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

 

 

Related Articles

Back to top button
error: Content is protected !!