ಕರಾವಳಿ
ಕೊಲ್ಲೂರು ದೇವಸ್ಥಾನ ಸಮೀಪ ಬಾರ್ & ರೆಸ್ಟೋರೆಂಟ್ ಆರಂಭಕ್ಕೆ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ

Views: 134
ಕುಂದಾಪುರ: ಕೊಲ್ಲೂರು ದೇವಸ್ಥಾನಕ್ಕೆ ಸಂಬಂಧಪಟ್ಟ ಶುಕ್ಲತೀರ್ಥ ದೇವಸ್ಥಾನದ ಸಮೀಪ ಯಾವುದೇ ಕಾರಣಕ್ಕೂ ಬಾರ್ & ರೆಸ್ಟೋರೆಂಟ್ ಪ್ರಾರಂಭ ಮಾಡಲು ಅವಕಾಶ ನೀಡಕೂಡದು ಎಂಬುದಾಗಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಜನಸೇವಾ ಟ್ರಸ್ಟ್ ಮೂಲಕ ನೀಡಲಾಯಿತು. ಪೂರಕವಾಗಿ ಸ್ಪಂದನೆ ನೀಡಿದ ಜಿಲ್ಲಾಧಿಕಾರಿ ವಿದ್ಯಾಕುಮಾರಿಯವರು ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಈ ಮನವಿಯನ್ನು ಪರಿಗಣಿಸಿ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡುವುದಾಗಿ ತಿಳಿಸಿದರು