ಇತರೆ

ಕೊಲ್ಲೂರಿನಲ್ಲಿ ಭೂ ಕಂಪನ:ಭಯದಿಂದ ಮನೆಯ ಹೊರಗಡೆ ಓಡಿದ ಜನರು!

Views: 230

ಕನ್ನಡ ಕರಾವಳಿ ಸುದ್ದಿ: ಕೊಲ್ಲೂರಿನ ಸುತ್ತಮುತ್ತಲ ಕೆಲವೆಡೆ ಲಘು ಭೂ ಕಂಪನ ಮಂಗಳವಾರ ಮಧ್ಯಾಹ್ನ 3.20ರ ಸುಮಾರಿಗೆ ಮನೆಯು ಲಘುವಾಗಿ ಕಂಪಿಸಿದ ಅನುಭವವಾಗಿದ್ದು ಪಾತ್ರೆಗಳು ನೆಲಕ್ಕೆ ಬಿದ್ದವು. ಭಯದಿಂದ ಮನೆಯ ಹೊರಗಡೆ ಓಡಿರುವುದಾಗಿ ಹೆಗ್ಡೆ ಹಕ್ಕು ನಿವಾಸಿ ಚಂದ್ರ ಬಳೇಗಾ‌ರ್ ತಿಳಿಸಿದ್ದಾರೆ.

ಕೊಲ್ಲೂರು ನಿವಾಸಿ ರಮೇಶ ಕುಂದರ್, ರಿಕ್ಷಾ ಚಾಲಕ ರಾಜು, ಸುದರ್ಶನ ಜೋಯಿಸ್ ಭೂಮಿ ಕಂಪಿಸಿದ ಅನುಭವ ಹಂಚಿಕೊಂಡಿದ್ದಾರೆ. ಕಲ್ಯಾಣಿ ಗುಡ್ಡೆಯಲ್ಲಿಯೂ ಇದೇ ಅನುಭವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಇನ್ನೂ ಕೆಲವರು ಆಗಸದಲ್ಲಿ ಭಾರೀ ಗುಡುಗಿನ ಸದ್ದು ಕೇಳಿರುವುದಾಗಿ ತಿಳಿಸಿದ್ದಾರೆ. ಇಲಾಖೆಗೆ ಆ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಉಡುಪಿ ವಿಪತ್ತು ನಿರ್ವಹಣ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಇಲಾಖೆಗೆ ಆ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಉಡುಪಿ ವಿಪತ್ತು ನಿರ್ವಹಣ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

Related Articles

Back to top button
error: Content is protected !!