ಪ್ರವಾಸೋದ್ಯಮ
ಕೊಡಗು: ಪಾಕ್ ಪಾಸ್‌ಪೋರ್ಟ್ ಹೊಂದಿರುವ ಯಾವುದೇ ವ್ಯಕ್ತಿಗಳು ಇಲ್ಲ, ಬಾಂಗ್ಲಾ ನುಸುಳುಕೋರರು ವಾಸ್ತವ್ಯ ಹೂಡಿರುವ ಶಂಕೆ!

Views: 33
ಕನ್ನಡ ಕರಾವಳಿ ಸುದ್ದಿ: ಕೊಡಗು ಜಿಲ್ಲೆಯಲ್ಲಿ ಪಾಕಿಸ್ತಾನಿ ಪಾಸ್‌ಪೋರ್ಟ್ ಹೊಂದಿರುವ ಯಾವುದೇ ವ್ಯಕ್ತಿಗಳು ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಸ್ಪಷ್ಟಪಡಿಸಿದ್ದಾರೆ.
ಜಮ್ಮುಕಾಶ್ಮೀರದ ಪಹಲ್ಲಾಂನಲ್ಲಿ ಭಯೋತ್ಪಾದಕರಿಂದ ನಡೆದ ಪ್ರವಾಸಿಗರ ಮಾರಣಹೋಮದ ಬಳಿಕ ಕೇಂದ್ರ ಸರಕಾರ 48ಗಂಟೆಗಳಲ್ಲಿ ಪಾಕ್ ಪ್ರಜೆಗಳನ್ನು ಭಾರತದಿಂದ ಹೊರಹೋಗುವಂತೆ ಸೂಚಿಸಿದೆ.
ಅದರನ್ವಯ ಕೊಡಗು ಜಿಲ್ಲೆಯಲ್ಲಿ ಪಾಕಿಸ್ತಾನಿ ಪ್ರಜೆಗಳು ಇದ್ದಾರೆಯೇ ಎಂಬ ಪ್ರಕಾರ ಪ್ರಶ್ನೆಗೆ ರಾಮರಾಜನ್ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾ ನುಸುಳುಕೋರರು ವಾಸ್ತವ್ಯ ಹೂಡಿರುವ ಶಂಕೆ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಅಸ್ಸಾಂ ಕಾರ್ಮಿಕರು ಕೆಲಸ ಮಾಡುತ್ತಿರುವ ಕಾಫಿ ತೋಟಗಳ ಮಾಲಕರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಕಾರ್ಮಿಕರ ಮಾಹಿತಿ ನೀಡುವಂತೆ ಹಲವು ಬಾರಿ ಸೂಚಿಸಲಾಗಿದೆ.