ಕರಾವಳಿ
ಕೊಚ್ಚುವೇಲಿ- ಕುರ್ಲಾ ಎಕ್ಸ್ ಪ್ರೆಸ್ ರೈಲು ಕುಂದಾಪುರದಲ್ಲಿ ವಾರಕ್ಕೆರಡು ದಿನ ನಿಲುಗಡೆಗೆ ರೈಲ್ವೆ ಸಚಿವರ ಆದೇಶ

Views: 57
ಕುಂದಾಪುರದಲ್ಲಿ ಕೊಚ್ಚುವೇಲಿ- ಕುರ್ಲಾ ರೈಲಿಗೆ ಬಿಲುಗಡೆಗೆ ಅವಕಾಶ ಕಲ್ಪಿಸುವಂತೆ ಮನವಿ ಹಿನ್ನೆಲೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಂದಿಸಿ ನಿಲುಗಡೆಗೆ ಸೂಚನೆಗೆ ಆದೇಶ ನೀಡಿದ್ದಾರೆ.
ಕರಾವಳಿಯಿಂದ ಮುಂಬೈ ಕಡೆಗೆ ತೆರಳಲು ಮುಂದಿನ ವಾರದಿಂದ ಈ ರೈಲು ನಿಲುಗಡೆ ಆರಂಭಿಸಲಿದ್ದು,ಶಬರಿಮಲೆ ಯಾತ್ರಿಗಳಿಗೆ ಹಾಗೂ ಕೇರಳ ಭಾಗದಿಂದ ಕೊಲ್ಲೂರು ದೇಗುಲಕ್ಕೆ ಬರುವ ಯಾತ್ರಿಗಳಿಗೆ ಅನುಕೂಲವಾಗಲಿದೆ.
ಮುಂಬೈಗೆ ಬೇಡಿಕೆಗೆ ಅನುಗುಣವಾಗಿ ರೈಲು ಸೌಲಭ್ಯಗಳಿಲ್ಲದ ಕಾರಣ ಮುಂಬೈಗೆ ಹೆಚ್ಚುವರಿ ರೈಲುಗಳಿಗೆ ನಿಲುಗಡೆ ಕೋರಿ ಸಮಿತಿ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದು, ಕುಂದಾಪುರ ನಿಲ್ದಾಣದಲ್ಲಿ ಕೊಚ್ಚುವೇಲಿ -ಕುರ್ಲಾ ವಾರಕ್ಕೆರಡು ದಿನದ ರೈಲಿಗೆ ನಿಲುಗಡೆಗೆ ಸಚಿವ ಆದೇಶ ಕೊಡಿಸುವಲ್ಲಿ ಸಫಲರಾಗಿದ್ದಾರೆ.
ಜನತೆಯ ಬಹುಕಾಲದ ಬೇಡಿಕೆ ಈಡೇರಿಸಿದ ಸಂಸದರಿಗೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿಯ ಅವಿನಾಶ್ ಉಳ್ತೂರು ಅವರಿಗೆ ಕುಂದಾಪುರ ರೈಲು ಪ್ರಯಾಣಿಕರ ಸಮಿತಿ, ಧನ್ಯವಾದ ತಿಳಿಸಿದೆ.