ಇತರೆ

ಕುಶಾಲನಗರ: ಕಾವೇರಿ ನದಿಯಲ್ಲಿ ಸ್ಥಾನಕ್ಕೆ ಇಳಿದ ಮೂವರು ಸ್ನೇಹಿತರು ಮುಳುಗಿ ಸಾವು 

Views: 28

ಕೊಡಗು: ಕುಶಾಲನಗರ ಸಮೀಪ ಕೂಡಿಗೆಯಲ್ಲಿ ಸ್ಥಾನಕ್ಕೆ ತೆರಳಿದ ಮೂವರು ಸ್ನೇಹಿತರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಚಿಕ್ಕತೂರು ಮೂಲದ ಶ್ರೀನಿವಾಸ್ ಅಲಿಯಾಸ್ ಅಪ್ಪು (23) ಕಣಿವೆಯ ಸಚಿನ್ (25) ಮುಳುಸೋಗೆಯ ಜನತಾ ಕಾಲೋನಿಯ ನಿವಾಸಿ ವಿನೋದ್ (25) ಮೃತಪಟ್ಟ ದುರ್ದೈವಿಗಳು ಎಂದು ತಿಳಿದುಬಂದಿದೆ.

5 ಜನ ಸ್ನೇಹಿತರು ಗುರುವಾರ ಸಂಜೆ ವೇಳೆ 5 ಗಂಟೆ ಸಮಯದಲ್ಲಿ ಕಾರು ನಿಲ್ಲಿಸಿ, ನದಿಯ ಬಳಿ ಸ್ಥಾನಕ್ಕೆಂದು ಇಳಿದಿದ್ದಾರೆ, ಈ ಸಂದರ್ಭ ಆಳವಾದ ನದಿಯಲ್ಲಿ ಮುಳುಗಿದ ಒಬ್ಬನನ್ನು ರಕ್ಷಿಸಲು ಹೋದ ಮತ್ತೆ ಇಬ್ಬರೂ ಕೂಡ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತ ದೇಹಕ್ಕಾಗಿ ಶೋಧ ಕಾರ್ಯ ಭರದಿಂದ ಸಾಗುತ್ತಿದ್ದು,  ಡಿವೈಎಸ್ ಪಿ ಗಂಗಾಧರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button