ಇತರೆ

ಕುಂದಾಪುರ: ಸೌಕೂರಿನಲ್ಲಿ ಮನೆಯ ಕೆಲಸಕ್ಕಿದ್ದ ವ್ಯಕ್ತಿಯಿಂದಲೇ ಕಳ್ಳತನ 

Views: 157

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಸೌಕೂರು ಗ್ರಾಮದ ಸುಮಾವತಿ ಅವರ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯಿಂದಲೇ ಕಳ್ಳತನ ನಡೆದಿದೆ.

ಮನೆ ಬೇಸಾಯ ಕೆಲಸಕ್ಕೆಂದು ಹಾವೇರಿ ಜಿಲ್ಲೆಯ ಸೋಮಾಪುರದ ಮಂಜುನಾಥ ಕೋಡಿಹಳ್ಳಿ ಎಂಬ ವ್ಯಕ್ತಿಯನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಮದುವೆಗೆಂದು ಮನೆಗೆ ಬೀಗ ಹಾಕಿ ಬೀಗ ಅಡಗಿಸಿಟ್ಟು ಹೋಗಿದ್ದರು. ಆಗ ಮಂಜುನಾಥ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು ಮರಳಿ ಮನೆಗೆ ಬಂದಾಗ ಕೆಲಸದವನೂ ಇರಲಿಲ್ಲ. ಕಪಾಟಿನಲ್ಲಿದ್ದ 60,000 ರೂಪಾಯಿಯೂ ಸಹ ಇರಲಿಲ್ಲ.ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button