ಕರಾವಳಿ
ಕುಂದಾಪುರ: ಮನೆ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ

Views: 119
ಕುಂದಾಪುರ: ತಾಲೂಕಿನ ತೆಕ್ಕಟ್ಟೆ, ಬಸ್ರೂರು, ಬಳ್ಕೂರಿನಲ್ಲಿ ಕಳ್ಳತನ ನಡೆದ ಬೆನ್ನಲ್ಲೇ ಇಲ್ಲಿನ ಮಂಗಲ ಪಾಂಡೆ ರಸ್ತೆಯ ವಾಸವಿರದ ಮನೆಯಲ್ಲಿ ಕಳ್ಳತನ ನಡೆದ ಬಗ್ಗೆ ತಿಳಿದುಬಂದಿದೆ.
ಮನೆ ಮಾಲಕ ಉಮೇಶ ಅವರು ವಿದೇಶದಲ್ಲಿದ್ದು, ಅವರ ಸಹೋದರ ದಿನೇಶ್ ಮನೆಯನ್ನು ವಾರಕ್ಕೊಮ್ಮೆ ಬಂದು ನೋಡಿ ಹೋಗುತ್ತಿದ್ದರು.
ದಿನೇಶ್ ಅವರು ಮನೆಗೆ ಬಂದು ನೋಡಿದಾಗ ಕಳ್ಳರು ಮನೆಯ ಒಂದನೆ ಮಹಡಿಯ ಬಾಗಿಲನ್ನು ಒಡೆದು, ಮೂರು ಕೊಠಡಿಗಳ ಗೊಡ್ರೇಜ್‌ನ ಬಾಗಿಲನ್ನು ಒಡೆದು ಹಾಕಿ ಗೊಡ್ರೇಜಿನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಿದ್ದಾರೆ. ಪ್ರಕರಣ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.