ಕುಂದಾಪುರ: ಬೇಳೂರು ಗ್ರಾಮ ಸಹಾಯಕಿಗೆ ಮಾನಸಿಕ ಕಿರುಕುಳ,ನಿಂದನೆ ಆರೋಪ;15 ಮಂದಿಯ ವಿರುದ್ಧ ಪ್ರಕರಣ

Views: 359
ಕನ್ನಡ ಕರಾವಳಿ ಸುದ್ದಿ :ಕುಂದಾಪುರ ತಾಲೂಕಿನ ಬೇಳೂರು ಗ್ರಾಮಪಂಚಾಯತ್‌ನ ಗ್ರಾಮ ಸಹಾಯಕಿ ಸುಶೀಲಾ ಅವರಿಗೆ ಮಾನಸಿಕ ಕಿರುಕುಳ ನೀಡಿರುವ ಹಿನ್ನಲೆಯಲ್ಲಿ 15 ಮಂದಿಯ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯರ ತಂಡ ನನಗೆ ಮಾನಸಿಕ ಕಿರುಕುಳ ನೀಡಿರುವುದಾಗಿ ಸುಶೀಲಾ ಅವರು ಕುಂದಾಪುರ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ನ್ಯಾಯಾಲಯದ ಆದೇಶದಂತೆ ಕೋಟ ಪೊಲೀಸ್ ಠಾಣೆಯಲ್ಲಿ 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಸ್ಥಳೀಯರಾದ ಜಯಶೀಲ ಶೆಟ್ಟಿ, ರಾಘವೇಂದ್ರ ಮರಕಾಲ, ಕರುಣಾಕರ ಶೆಟ್ಟಿ ಬೇಳೂರು, ದಿನಕರ ಶೆಟ್ಟಿ ಮೊಗೆಬೆಟ್ಟು, ಸುರೇಶ ಮೊಗವೀರ, ಕೃಷ್ಣಯ್ಯ ಮೊಗವೀರ, ರಾಜಗೋಪಾಲ ಅಡಿಗ, ಅಶೋಕ್ ಕುಮಾರ್ ಶೆಟ್ಟಿ, ನವೀನ್ ಕುಮಾರ್ ಶೆಟ್ಟಿ, ರವಿ ಮುಳ್ಳುಗುಡ್ಡೆ, ಪ್ರವೀಣ ಶೆಟ್ಟಿ, ರಾಜೇಂದ್ರ ಶೆಟ್ಟಿ, ಸೀತಾರಾಮ ಶೆಟ್ಟಿ, ರವಿ ದೇವಾಡಿಗ, ಶಶಿಧರ ಶೆಟ್ಟಿ ಅವರು ಉಡುಪಿ ಜಿಲ್ಲಾಧಿಕಾರಿಯವರಿಗೆ ನನ್ನ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ದೂರನ್ನು ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.ಇದಲ್ಲದೆ ನಿಂದನೆಯನ್ನೂ ಮಾಡಿದ್ದಾರೆ. ಇದರಿಂದ ನನಗೆ ಮಾನಸಿಕ ನೋವು ಉಂಟಾಗಿದೆ ಎಂದು ಸುಶೀಲಾ ದೂರಿನಲ್ಲಿ ಹೇಳಿದ್ದಾರೆ.






