ಕುಂದಾಪುರ: ಬಸ್ರೂರು ಬಳ್ಕೂರಿನ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Views: 3542
ಕನ್ನಡ ಕರಾವಳಿ ಸುದ್ದಿ
ಕುಂದಾಪುರ: ಬಸ್ರೂರು ಸಮೀಪ ಬಳ್ಕೂರಿನ ಮಹಿಳೆಯೊಬ್ಬರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಶ್ರುತಿ (33) ಎಂದು ತಿಳಿದುಬಂದಿದೆ.
ಬಳ್ಕೂರಿನ ನಿವಾಸಿ, ಸಮೀಪದ ಪಾನಕದ ಕಟ್ಟೆ ಎಲ್ಲಿ ಹೇರ್ ಸೆಲೂನ್ ನಡೆಸುತ್ತಿದ್ದ ವಿನಯ್ ಭಂಡಾರಿ ಅವರ ಪತ್ನಿ,ಪುತ್ರಿ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ.
ಶೃತಿ ಹಾಗೂ ವಿನಯ್ ಅಂತರ್ಜಾತಿ ವಿವಾಹವಾಗಿದ್ದರು. ಸಾಲಿಗ್ರಾಮದ ಮೂಲದ ಶೃತಿ ಬ್ರಾಹ್ಮಣರಾಗಿದ್ದು ಕಾಲೇಜು ಸಂದರ್ಭದಲ್ಲಿ ವಿನಯ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಪ್ರಸ್ತುತ ಬಳ್ಕೂರು ಸಮೀಪದ ಬಿಹೆಚ್ ಎಂಬಲ್ಲಿ ನೆಲೆಸಿದ್ದ ವಿನಯ್ ಹಾಗೂ ಶೃತಿ ದಂಪತಿಗಳು ಬಳ್ಕೂರಿನಲ್ಲಿ ಜಾಗ ಖರೀದಿ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಬುಧವಾರ ಜಾಗದ ನೋಂದಣಿಗೆ ಹೋಗಿ ಬಂದಿದ್ದರು
ಬಳಿಕ ಶ್ರುತಿ ಅವರು ತನ್ನ ಸ್ಕೂಟಿಯಲ್ಲಿ ಬಳ್ಕೂರು ಸಮೀಪದ ಹೊಳೆಯ ಬದಿಯಲ್ಲಿ ಹೋಗಿದ್ದು ಅಲ್ಲಿ ಸ್ಕೂಟಿಯನ್ನು ನಿಲ್ಲಿಸಿ ಹೊರಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ತಿಳಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಶೋಧ ಕಾರ್ಯ ನಡೆಸಿದ್ದಾರೆ. ಬುಧವಾರ ಸಂಜೆ ಮೃತ ದೇಹವನ್ನು ಮೇಲಕ್ಕೆತ್ತಿ ಕುಂದಾಪುರದ ಶವಗಾರದಲ್ಲಿ ಇರಿಸಲಾಗಿದೆ.ಗುರುವಾರ ಬಳ್ಕೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.