ಇತರೆ
ಕುಂದಾಪುರ ಪ್ರತ್ಯೇಕ ಪ್ರಕರಣ:ಇಬ್ಬರು ಕುಸಿದು ಬಿದ್ದು ಸಾವು

Views: 120
ಕುಂದಾಪುರ: ವಂಡ್ಸೆ ಕೆಳಪೇಟೆಯಲ್ಲಿ ಮನೆ ಕೆಲಸ ಬಂದ ವ್ಯಕ್ತಿ ಯಜಮಾನರ ಮನೆಯಲ್ಲಿ ಊಟ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಹಾವೇರಿ ಜಿಲ್ಲೆಯ ಅರ್ಜುನ್ ಮಲ್ಲಪ್ಪ ಅಂಬಿಗೇರ( 59) ಮೃತ ಪಟ್ಟವರು.
ಆತ ಮೂರು ವರ್ಷಗಳಿಂದ ವಿಜಯ ಅವರ ತೋಟದ ಕೆಲಸ ಮಾಡಿಕೊಂಡು ಇಲ್ಲಿಯೇ ವಾಸವಾಗಿದ್ದರು. ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಸಿದ್ದಾಪುರ ಹೊನ್ಕಲು ಶಾಂಟಿ ವರ್ಗೀಸ್ ಅವರ ರಬ್ಬರ್ ತೋಟದಲ್ಲಿ ಏಳು ವರ್ಷಗಳಿಂದ ರಬ್ಬರ್ ಟಾಪಿಂಗ್ ಕೆಲಸ ನಿರತರಾಗಿದ್ದ ಕೇರಳ ಮೂಲದ ತುಳಿಸಿಧರನ್ ಅವರು ಅಲ್ಬಾಡಿ ಪೇಟೆಯಿಂದ ಮರಳುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತೋಟದ ರೈಟರ್ ಮಹಮ್ಮದ್ ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.