ಇತರೆ
ಕುಂದಾಪುರ ನೆರೆಮನೆಯ ವ್ಯಕ್ತಿಯಿಂದ ವಿವಾಹಿತೆಗೆ ಬೆದರಿಕೆ, ಪ್ರಕರಣ ದಾಖಲು

Views: 197
ಕನ್ನಡ ಕರಾವಳಿ ಸುದ್ದಿ: ಕುಂದಾಪುರದಲ್ಲಿ ನೆರೆಮನೆಯ ವ್ಯಕ್ತಿಯಿಂದ ವಿವಾಹಿತೆಗೆ ಬೆದರಿಕೆಯೊಡ್ಡಿದ ಕುರಿತು ಪ್ರಕರಣ ದಾಖಲಾಗಿದೆ.
ವಿವಾಹಿತೆ ರಮ್ಯಾ (31) ನೀಡಿದ ದೂರಿನಂತೆ ತನಗೆ ನೆರಮನೆಯ ಶಿವರಾಜ್ ಎಂಬಾತನ ಪರಿಚಯವಾಗಿದ್ದು ಅನ್ನೋನ್ಯವಾಗಿ ಮಾತನಾಡುತ್ತಿದ್ದೆವು. ಕರೆ, ವೀಡಿಯೋ ಕರೆ, ಸಂದೇಶ ವಿನಿಮಯ ನಡೆದಿತ್ತು. ಇದನ್ನೇ ದುರುಪಯೋಗಪಡಿಸಿಕೊಂಡ ಆತ ಈಗ, ‘ನೀನು ನನ್ನನ್ನು ಪ್ರೀತಿ ಮಾಡಬೇಕು, ನಾನು ಹೇಳಿದ ಹಾಗೇ ಕರೆ, ವೀಡಿಯೋ ಕರೆ ಮಾಡಬೇಕು, ಇಲ್ಲದಿದ್ದಲ್ಲಿ ನಿನ್ನ ಗಂಡ, ಮಗುವಿಗೆ ತೊಂದರೆ ಕೊಡುತ್ತೇನೆ, ನಿನ್ನ ಮಾನ ತೆಗೆಯುತ್ತೇನೆ’ ಎಂದು ಆತ ಬೆದರಿಕೆ ಹಾಕುತ್ತಿದ್ದಾನೆ ಎಂದು ನೆರೆಮನೆಯ ಶಿವರಾಜ್ ವಿರುದ್ಧ ರಮ್ಯಾ ದೂರು ನೀಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.