ಕುಂದಾಪುರ: ಕಾಂತಾರ ಸಿನಿಮಾದ ‘ಸಿಂಗಾರ ಸಿರಿಯೇ’ ಸಾಹಿತಿ ಪ್ರಮೋದ್ ಮರವಂತೆ, ಗಾಯಕಿ ಸುಚೇತ ಕುಂದಾಪುರದಲ್ಲಿ ದಾಂಪತ್ಯ ಜೀವನಕ್ಕೆ

Views: 303
ಕನ್ನಡ ಕರಾವಳಿ ಸುದ್ದಿ:ʼಕಾಂತಾರʼ ಸಿನಿಮಾದ ʼಸಿಂಗಾರ ಸಿರಿಯೇʼ ಹಾಡಿನ ಮೂಲಕ ಚಂದವನದಲ್ಲಿ ಗಮನ ಸೆಳೆದ ಪ್ರಮೋದ್ ಗಾಯಕಿ ಸುಚೇತಾ ಅವರೊಂದಿಗೆ ಇತ್ತೀಚೆಗೆ(ಡಿ.5ರಂದು) ಕುಂದಾಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಮೋದ್ “ರಾಗಕ್ಕೆ ಪದ ಸೇರಿದೆ ಬದುಕೊಂದು ಹಾಡಾಗಿದೆ” ಎಂದು ಸಾಲು ಬರೆದು ನಿಶ್ಚಿತಾರ್ಥವಾಗಿದ್ದ ಫೋಟೋವನ್ನು ಹಂಚಿಕೊಂಡಿದ್ದರು.
ವಿವಾಹ ಸಮಾರಂಭದಲ್ಲಿ ನಟ – ನಿರ್ದೇಶಕ ರಿಷಬ್ ಶೆಟ್ಟಿ ಸೇರಿದಂತೆ ಹಲವರು ಭಾಗಿ ನವದಂಪತಿಗೆ ಶುಭಕೋರಿದ್ದರು.
ಡಿ.5ರಂದು ಕುಂದಾಪುರದಲ್ಲಿ ಸಿಂಗರ್ ಸುಚೇತ ಜೊತೆ ಪ್ರಮೋದ್ ಮರವಂತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಈಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ಕುಟುಂಬದವರ ಸಮ್ಮುಖದಲ್ಲಿ ಹಸೆಮಣೆ ಏರಿದರು.
ಪ್ರಮೋದ್ ಭಾವಿ ಪತ್ನಿಯ ಹೆಸರು ಸುಚೇತ ಬಸ್ರೂರು, ಕೆಜಿಎಫ್ 2 ಚಿತ್ರದಲ್ಲಿ ‘ಗಗನ ನೀ ಭುವನ ನೀ’ ಎಂಬ ಹಾಡನ್ನು ಸೊಗಸಾಗಿ ಹಾಡುವ ಮೂಲಕ ಸದ್ದು ಮಾಡಿದ್ದರು. ಇವರು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸೊಸೆಯಾಗಿದ್ದಾರೆ. ಇವರು ರವಿ ಬಸ್ರೂರು ಅವರ ಅಕ್ಕನ ಮಗಳು ಸುಚೇತ ಎಂದು ತಿಳಿದುಬಂದಿದೆ.