ಇತರೆ

ಕುಂದಾಪುರ: ಇಲಿ ಪಾಷಾಣ ಸೇವಿಸಿದ್ದ ಮಹಿಳೆ ಚಿಕಿತ್ಸೆಗೆ ಫಲಕಾರಿಯಾಗದೆ ಸಾವು

Views: 257

ಕನ್ನಡ ಕರಾವಳಿ ಸುದ್ದಿ: ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ಸ್ವಾತಿ (30) ಚಿಕಿತ್ಸೆಗೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

9 ವರ್ಷದ ಹಿಂದೆ ಬಸ್ರೂರಿನ ಸತೀಶ್ ಅವರೊಂದಿಗೆ ವಿವಾಹವಾಗಿದ್ದು, 8 ವರ್ಷದ ಪುತ್ರನಿದ್ದಾನೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ  ಎನ್ನುವುದು ತಿಳಿದು ಬಂದಿಲ್ಲ. ಸ್ವಾತಿ ಅವರ ತಾಯಿ ನಾಗರತ್ನಾ ಕಾಳಾವರ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button