ಇತರೆ
ಕುಂದಾಪುರ: ಆನಗಳ್ಳಿಯಲ್ಲಿ ಮೀನು ಹಿಡಿಯುವಾಗ ಬಲೆ ಸಮೇತ ಕೆರೆಗೆ ಬಿದ್ದು ಸಾವು
Views: 129
ಕನ್ನಡ ಕರಾವಳಿ ಸುದ್ದಿ: ಮೀನು ಹಿಡಿಯಲೆಂದು ಹೋದ ಯುವಕ ಬಲೆ ಸಮೇತ ಕೆರೆಗೆ ನೀರು ಬಿದ್ದು, ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಆನಗಳ್ಳಿ ಗ್ರಾಮದ ಆಗರಕಟ್ಟು ಎಂಬಲ್ಲಿನ ಕೆರೆಯಲ್ಲಿ ಅಗಸ್ಟ್ 27ರಂದು ಸಂಭವಿಸಿದೆ.
ಆನಗಳ್ಳಿ ಗ್ರಾಮದ ಗಾಣಿಗರಬೆಟ್ಟು ನಿವಾಸಿ ಉದಯ (30) ಮೃತರು. ಅವರು ಬೆಳಿಗ್ಗೆ ಮನೆಯಿಂದ ಬಲೆ ತೆಗೆದುಕೊಂಡು ಮೀನು ಹಿಡಿಯಲು ಹೋಗಿದ್ದು, ಆಗರಕಟ್ಟೆಯ ಕೆರೆಗೆ ಮೀನು ಹಿಡಿಯಲು ಬಲೆ ಹಾಕಿದ ಸಮಯ ಆಕಸ್ಮಿಕವಾಗಿ ಬಲೆ ಸಮೇತ ಕೆರೆಗೆ ಬಿದ್ದಿರುವುದಾಗಿ, ಅವರ ಸಹೋದರ ಮನೋಜ್ ನೀಡಿದ ದೂರಿನಂತೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






