ಇತರೆ

ಕುಂದಾಪುರ:ಸ್ಕೂಟಿ ನಿಲ್ಲಿಸಿ ಇಳಿಯುವಾಗ ಮಹಿಳೆ ಕುಸಿದು ಬಿದ್ದು ಸಾವು

Views: 392

ಕುಂದಾಪುರ: ಇಲ್ಲಿನ ವಡೇರಹೋಬಳಿ ಗ್ರಾಮದ ನೆಹರೂ ಮೈದಾನ ಬಳಿ ಸ್ಕೂಟಿ ನಿಲ್ಲಿಸಿ ಇಳಿಯುವಾಗ ಬಹಾದ್ದೂರ್‌ಷಾ ರಸ್ತೆಯ ನಿವಾಸಿ ಹರೀಶ್‌ ಖಾರ್ವಿ ಅವರ ಪತ್ನಿ ಸರೋಜಾ (45) ಅವರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಕುಸಿದು ಬಿದ್ದ ಸರೋಜಾ ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!