ಇತರೆ
ಕುಂದಾಪುರ:ಸಳ್ವಾಡಿಯಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಯುವತಿ ಸಾವು

Views: 619
ಕುಂದಾಪುರ: ಕಾಳಾವರ ಗ್ರಾಮದ ಸಳ್ವಾಡಿಯಲ್ಲಿ ಯುವತಿಯೊಬ್ಬಳು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಉದಯ ಅವರ ಪುತ್ರಿ ಮುಗ್ಧ (25) ಮೃತಪಟ್ಟವರು.
ಯುವತಿ ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಡಿ. 25ರಂದು ಮನೆಗೆ ಬಂದಿದ್ದರು. ರಾತ್ರಿ 10.30ರ ಸುಮಾರಿಗೆ ಮನೆಯ ಬಾವಿ ಬಳಿಗೆ ಹೋಗಿದ್ದಾಗ ಆಕಸ್ಮಿಕವಾಗಿ ಬಿದ್ದರು ಎನ್ನಲಾಗಿದೆ.
ಡಿ. 26ರ ಬೆಳಿಗ್ಗೆ ಮೃತದೇಹವನ್ನು ಸ್ಥಳೀಯರು, ಅಗ್ನಿಶಾಮಕದಳದವರ ಸಹಾಯದಿಂದ ಶವವನ್ನು ಮೇಲಕ್ಕೆತ್ತಲಾಯಿತು. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






