ಇತರೆ

ಕುಂದಾಪುರ:ಲೋ ಬಿಪಿಯಿಂದ ಬಾತ್ ರೂಮ್‌ನಲ್ಲಿ ಕುಸಿದು ಬಿದ್ದು ಸಾವು

Views: 163

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಎಪಿಎಂಸಿ ಮಾರ್ಕೆಟ್ ರಸ್ತೆಯ ಪಕ್ಕದ ನಿವಾಸಿಯಾಗಿದ್ದು, ಮೂತ್ರ ವಿಸರ್ಜನೆಗೆಂದು ಬಾತ್‌ ರೂಮ್‌ಗೆ ಹೋಗಿದ್ದಾಗ ಲೋ ಬಿಪಿಯಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ವ್ಯಾಪಾರಿ ಸಂದೀಪ್ (42) ಮೃತಪಟ್ಟವರು

ರಾತ್ರಿ ಊಟ ಮಾಡಿ ಮಲಗಿದ್ದರು.ಎ.19ರ ಬೆಳಿಗ್ಗೆ 5.30ರ ಹೊತ್ತಿಗೆ ಬಾತ್‌ ರೂಮ್‌ಗೆ ಹೋಗಿದ್ದಾಗ ಅವರು ಲೋ ಬಿಪಿಯಿಂದ ಅಸ್ವಸ್ಥರಾದರು. ಇದನ್ನು ಗಮನಿಸಿದ ಮನೆಯವರು ಕೂಡಲೇ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಪರೀಕ್ಷಿಸಿದ ವೈದ್ಯರು ಸಾವನ್ನಪ್ಪಿರುವುದಾಗಿ  ತಿಳಿಸಿದ್ದಾರೆ.

ತಂದೆ ಸಂಜೀವ ನೀಡಿದ ದೂರಿನಂತೆ ಕುಂದಾಪುರ ನಗರ ಠಾಣೆಯಲ್ಲಿ ದಾಖಲಾಗಿದೆ.

Related Articles

Back to top button