ಕರಾವಳಿ
ಕುಂದಾಪುರ:ಮೂಡ್ಲಕಟ್ಟೆ ರೈಲ್ವೆ ನಿಲ್ದಾಣಕ್ಕೆ ದಾನಿಗಳ ಸಹಕಾರದಿಂದ ಕೊಡುಗೆಗಳ ಉದ್ಘಾಟನೆ
"ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಹಿತರಕ್ಷಣಾ ಸಮಿತಿ ಹಾಗೂ ದಾನಿಗಳ ಸಹಕಾರದಿಂದ ಕುಂದಾಪುರ ನಿಲ್ದಾಣ ಅಭಿವೃದ್ಧಿಯಾಗುತ್ತಿದೆ. ಇನ್ನಷ್ಟು ಪ್ರಯಾಣಿಕರ ಶೆಲ್ಟರ್‌ನ ಅಗತ್ಯವಿದೆ. ಈ ನಿಲ್ದಾಣಕ್ಕೆ ಅಮೃತ್ ಭಾರತ್ ಯೋಜನೆ ಜಾರಿ ಹಾಗೂ ಕುಂದಾಪುರದಲ್ಲಿ ವಂದೇ ಭಾರತ್ ರೈಲು ನಿಲುಗಡೆ ಬಗ್ಗೆ ರೈಲ್ವೇ ಮಂಡಳಿ ತೀರ್ಮಾನಕೈಗೊಳ್ಳಲಿದೆ"

Views: 62
ಕುಂದಾಪುರ: ಕುಂದಾಪುರದ ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ದಾನಿಗಳು ಕೊಡಮಾಡಿದ ಪ್ರಯಾಣಿಕರ ತಂಗುದಾಣ ಸಹಿತ ವಿವಿಧ ಕೊಡುಗೆಗಳ ಉದ್ಘಾಟನೆ ನೆರವೇರಿತು .
ಶ್ರೀರಾಮ್ ಗ್ರಾನೈಟ್ಸ್ ಕೊಡಮಾಡಿದ ಪ್ರಯಾಣಿಕರಶೆಲ್ಟರ್ ಉದ್ಘಾಟಿಸಿದ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಮಾತನಾಡಿ, ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯು ಆಸಕ್ತಿ ವಹಿಸಿ ದಾನಿಗಳ ಮೂಲಕ ನಿಲ್ದಾಣಕ್ಕೆ ಅಗತ್ಯ ಸೌಕರ್ಯಗಳನ್ನು ಒದಗಿಸಿರುವುದು ಶ್ಲಾಘನೀಯ. ದಾನಿಗಳಿಂದ ಮಾತ್ರ ವಲ್ಲದೆ ಸರಕಾರದಿಂದಲೂ ಈ ನಿಲ್ದಾಣವನ್ನು ಉತ್ತಮವಾಗಿಸಲು ಸಚಿವರಲ್ಲಿಯೂ ಮನವಿ ಸಲ್ಲಿಸಲಾಗುವುದು ಎಂದರು.
ದೇಶದ 100 ಕಡೆಗಳಿಂದ ಅಯೋಧ್ಯೆಗೆ ರೈಲು ಸಂಚಾರ ಆರಂಭ ಗೊಳ್ಳಲಿದ್ದು, ಕರಾವಳಿಯಿಂದಲೂ ಆರಂಭಿಸಬೇಕು ಎನ್ನುವುದು ನಮ್ಮ ಬೇಡಿಕೆ. ಪೇಜಾವರ ಶ್ರೀಗಳ ಸಹಕಾರದೊಂದಿಗೆ, ಸಂಸದರು, ಶಾಸಕರ ಪ್ರಯತ್ನವೂ ಬೇಕಾಗಿದೆ. ಅಮೃತ್ ಭಾರತ್ ಯೋಜನೆಯಡಿ ಇಲ್ಲಿನ ನಿಲ್ದಾಣಗಳು ಅಭಿವೃದ್ಧಿಯಾಗಲಿ ಎಂದು ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಒತ್ತಾಯಿಸಿದರು.