ಇತರೆ
ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ್ದ ಯುವಕ ನೀರು ಪಾಲು

Views: 74
ಕೊಡಗು: ಇತ್ತೀಚೆಗೆ ಮೂವರು ಯುವಕರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟ ಬೆನ್ನಲ್ಲೇ ಇದೀಗ ಮತ್ತೊಬ್ಬ ಯುವಕ ನೀರುಪಾಲಾಗಿರುವುದು ಕಂಡುಬಂದಿದೆ. ಸ್ನಾನಕ್ಕೆಂದು ಕಾವೇರಿ ನದಿಗೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಕುಶಾಲನಗರ ಸಮೀಪದ ನಂಜರಾಯಪಟ್ಟಣದಲ್ಲಿ ನಡೆದಿದ್ದು, ಸ್ನೇಹಿತರೊಂದಿಗೆ ಸ್ನಾನಕ್ಕೆ ತೆರಳಿದ್ದ ಸಂದರ್ಭ ದುರ್ಘಟನೆ ನಡೆದಿದೆ.
ಚೆಟ್ಟಳ್ಳಿ ಸಮೀಪದ ಕಂಡಕೆರೆ ನಿವಾಸಿ ಶಂಭು ಎಂಬುವರ ಪುತ್ರ ಶರತ್ (24) ಮೃತ ದುರ್ದೈವಿ. ಸ್ಥಳಕ್ಕೆ ಅಗ್ನಿಶಾಮದಳ ಹಾಗೂ ದುಬಾರೆ ರಾಫ್ಟಿಂಗ್ ತಂಡದಿಂದ ಯುವಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.