ಇತರೆ

ಕಾರು ಮರಕ್ಕೆ ಡಿಕ್ಕಿ; ಸುಳ್ಯ ಮೂಲದ ಸಾಫ್ಟ್‌ವೇ‌ರ್ ಇಂಜೆನಿಯರ್ ಸಾವು

Views: 91

ಕನ್ನಡ ಕರಾವಳಿ ಸುದ್ದಿ : ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ನಡೆದ ಕಾರು ಅಪಘಾತದಲ್ಲಿ ಸುಳ್ಯ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಂದಡ್ಕದ ಶಶಿಕಲಾ ಎಂಬವರ ಪುತ್ರಿ ಕ್ಷಿಪ್ರ ಮೃತ ಯುವತಿ. ಶಶಿಕಲಾರ ಏಕಮಾತ್ರ ಪುತ್ರಿಯಾಗಿದ್ದ ಕ್ಷಿಪ್ರ, ಸುಳ್ಯದಲ್ಲಿ ಡಿಪ್ಲೋಮಾ, ಎಂ.ಟೆಕ್ ಮುಗಿಸಿ, ಬೆಂಗಳೂರಿನಲ್ಲಿ ಸಾಫ್ಟ್ ವೇ‌ರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಸಹೋದ್ಯೋಗಿಗಳೊಂದಿಗೆ ಟೂರಿಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿದ್ದು, ಪರಿಣಾಮ ಕ್ಷಿಪ್ರ ಕೊನೆಯುಸಿರೆಳೆದಿದ್ದು, ಕಾರಿನಲ್ಲಿದ್ದ ಇತರರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

Related Articles

Back to top button
error: Content is protected !!