ಇತರೆ
ಕಾಳಾವರದ ಸಲ್ವಾಡಿಯಲ್ಲಿ ಮಗಳ ಅಗಲುವಿಕೆ ಖಿನ್ನತೆಗೆ ಒಳಗಾಗಿದ್ದ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ

Views: 383
ಕುಂದಾಪುರ: ಮಗಳ ಅಗಲುವಿಕೆಯ ನೋವಿನಲ್ಲಿದ್ದ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಾಳಾವರ ಗ್ರಾಮದ ಸಲ್ವಾಡಿಯಲ್ಲಿ ನಡೆದಿದೆ.
ಪ್ರಮೀಳಾ ಶೆಟ್ಟಿ(55) ಆತ್ಮಹತ್ಯೆ ಮಾಡಿಕೊಂಡವರು. 2024ರ ಡಿ.24ರಂದು ಪುತ್ರಿ ಬಾವಿಗೆ ಹಾರಿ ಮೃತಪಟ್ಟಿದ್ದರು. ಅದೇ ಚಿಂತೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಸಂಬಂಧಿ ಚತುರ್ ಶೆಟ್ಟಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.