ಕಾಳಾವರದಲ್ಲಿ ಹಿಂಸಾತ್ಮಕ ರೀತಿಯಲ್ಲಿ ದನ ಕಳ್ಳತನ: ಸಿಸಿ ಟಿವಿಯಲ್ಲಿ ಸೆರೆ

Views: 160
ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಸಮೀಪ ಕಾಳಾವರದಲ್ಲಿ ಇಬ್ಬರು ಆರೋಪಿಗಳು ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕಳ್ಳತನ ನಡೆಸಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕಾಳಾವರದ ನಿವಾಸಿ ಮನೋಹರ ಎಂಬವರ ದನ ಕಳ್ಳತನವಾಗಿದೆ.
ಕಾಳಾವರದ ಮನೋಹರ ಅವರಿಗೆ ಸೇರಿದ ತಮ್ಮ ದನಗಳನ್ನು ಮೇಯಲು ಬಿಟ್ಟಿದ್ದು ಎರಡು ದನಗಳು ಮನೆಗೆ ವಾಪಾಸು ಬಾರದೇ ಇದ್ದು, ಒಂದು ದನ ಮನೆಗೆ ವಾಪಾಸು ಬಂದಿದ್ದು ನಂತರ ಮತ್ತೊಂದು ದನವು ಬಾರದೇ ಇರುವುದನ್ನು ನೋಡಿ ಪರಿಸರದಲ್ಲಿ ಹಾಡಿಯಲ್ಲಿ ಎಷ್ಟು ಹುಡುಕಿದರೂ ಸಿಕ್ಕಿರುವುದಿಲ್ಲ. ಕಾಳಾವರ ಜಂಕ್ಷನ್ ನ ಅಭಿಮಾನ ಬಾರ್ ಬಳಿಯಲ್ಲಿರುವ ನಂದಿಕೇಶ್ವರ ಬೇಕರಿಯ ಸಿಸಿ ಟಿವಿ ಕ್ಯಾಮಾರಾವನ್ನು ಪರಿಶೀಲಿಸಿದಾಗ ಮನೋಹರ ಮನೆಯ 2 ದನಗಳು ಬೇಕರಿಯ ಪಕ್ಕದಲ್ಲಿ ಮಲಗಿದ್ದು ಜುಲೈ 28 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಆ ದನಗಳಲ್ಲಿ ಒಂದು ದನವನ್ನು ಯಾರೋ ಇಬ್ಬರು ಯಾವುದೋ ಆಹಾರವನ್ನು ದನಕ್ಕೆ ನೀಡಿ ದನದ ಕೊಂಬನ್ನು ಹಿಡಿದು ಗಟ್ಟಿಯಾಗಿ ಎಳೆದು ದನದ ಕಾಲುಗಳನ್ನು ಕಟ್ಟಿ ಹಾಕುತ್ತಿರುವುದು ಕಂಡು ಬಂದಿದೆ. ದನವನ್ನು ಇಬ್ಬರು ಆರೋಪಿಗಳು ವಧೆ ಮಾಡುವ ಉದ್ದೇಶದಿಂದ ಯಾವುದೋ ವಾಹನದಲ್ಲಿ ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






