ಕರಾವಳಿ
ಕಾರ್ಕಳ ಗೃಹಪ್ರವೇಶ ಸಮಾರಂಭದ ವಿಡಿಯೋ ಮಾಡುವಾಗ ಕುಸಿದು ಬಿದ್ದ ವಿಡಿಯೋಗ್ರಾಫರ್ ಸಾವು

Views: 114
ಉಡುಪಿ: ಗೃಹಪ್ರವೇಶ ಸಮಾರಂಭದಲ್ಲಿ ವಿಡಿಯೋಗ್ರಫಿ ಮಾಡುವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಕುಕ್ಕುಜೆ ಎಂಬಲ್ಲಿ ನಡೆದಿದೆ.
ಕಾರ್ಕಳ ತೆಳ್ಳಾರು ನಿವಾಸಿ ದೀಪಕ್ ಶೆಟ್ಟಿ (45) ಮೃತ ದುರ್ದೈವಿ.ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕಡ್ತಲ ಗ್ರಾಮದ ಕುಕ್ಕುಜೆಯಲ್ಲಿ ನೂತನ ಮನೆಯೊಂದರ ಗೃಹಪ್ರವೇಶದ ಹಿನ್ನೆಲೆಯಲ್ಲಿ ವಿಡಿಯೋಗ್ರಫಿ ಮಾಡುತ್ತಿದ್ದರು. ಈ ವೇಳೆ ಹೃದಯಾಘಾತವಾಗಿ ನೆಲಕ್ಕೆ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯಯೇ ಕೊನೆಯುಸಿರೆಳೆದಿದ್ದಾರೆ.