ಇತರೆ
ಕಾರು ನಿಯಂತ್ರಣ ತಪ್ಪಿ ಹುಣಸೆ ಮರಕ್ಕೆ ಡಿಕ್ಕಿ: ಇಬ್ಬರ ದುರ್ಮರಣ

Views: 0
ಶಿರಸಿ ಮೂಲದ ಇಬ್ಬರು ವ್ಯಕ್ತಿಗಳು ರಾಣೇಬೆನ್ನೂರಿನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿರುವಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹುಣಸೆ ಮರಕ್ಕೆ ಡಿಕ್ಕಿ ಹೊಡೆದ ದುರ್ಘಟನೆ ಸಂಭವಿಸಿದೆ.
ಶಿರಸಿ ತಾಲೂಕಿನ ಹುಲಿಕಲ್ ಗ್ರಾಮದ ಮೂಲದವರಾಗಿದ್ದು ವಿಠಲ ಹಾಗೂ ಜಯಂತಿ ದಿನೇಶ್ ಮೃತಪಟ್ಟ ದುರ್ದೈವಿಗಳು. ಇವರು ಶಿರಸಿಯ ಮಾರಿಗುಡಿ ಹಿಂಭಾಗದ ಸಾಯಿ ಮಂದಿರ ಬಳಿಯ ನಿವಾಸಿಗಳು ಎಂದು ತಿಳಿದು ಬಂದಿದೆ.