ರಾಜಕೀಯ
ಕಾಂಗ್ರೆಸ್ ಪಕ್ಷದಿಂದ ಭಾರತದ ಏಕತೆಗೆ ಹಾಗೂ ಸಾರ್ವಭೌಮತ್ವಕ್ಕೆ ದಕ್ಕೆ: ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಐರೋಡಿ ವಿಠ್ಠಲ ಪೂಜಾರಿ

Views: 21
ಕೋಟ: ಪರಮ ಪಾತಕಿ ಪಾಕಿಸ್ತಾನಕ್ಕೆ ಜೈ ಕಾರ ಕೂಗುವ ಮೂಲಕ ಕಾಂಗ್ರೆಸ್ ಪಕ್ಷ ಭಾರತದ ಏಕತೆಗೆ ಹಾಗೂ ಸಾರ್ವಭೌಮತ್ವಕ್ಕೆ ದಕ್ಕೆ ತರುವ ಮೂಲಕ ತನ್ನ ಅಧಿಕಾರದ ದುರ್ವರ್ತನೆಯ ಪರಮಾವಧಿಯ ಎಲ್ಲೆ ಮೀರಿದ್ದು ತನ್ನ ಪಕ್ಷದ ರಾಜ್ಯ ಸಭಾ ಸದಸ್ಯ ಹಾಗು ಕಾರ್ಯಕರ್ತರಿಗೆ ದೇಶ ಪ್ರೇಮ ಹಾಗು ಭಾರತದ ಆಖಂಡತೆಯ ಪಾಠ ಮಾಡುವುದು ಸೂಕ್ತ
ಭಾರತೀಯರಾಗಿ ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಖಂಡಾತುಂಡವಾಗಿ ಖಂಡಿಸುತ್ತಾ ಹೀಗೆ ಮುಂದುವರಿದಲ್ಲಿ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾ ನೇತೃತ್ವದಲ್ಲಿ ರಾಜ್ಯ ವ್ಯಾಪಿ ಕಾಂಗ್ರೆಸ್ ಪಕ್ಷದ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಬಿಜೆಪಿ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಐರೋಡಿ ವಿಠ್ಠಲ ಪೂಜಾರಿ ಹೇಳಿಕೆ ನೀಡಿದ್ದಾರೆ.