ಕಾಂಗ್ರೆಸ್ಸಿಗೆ ಠಕ್ಕರ್ ಕೊಡಲು ಲಿಂಗಾಯಿತ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯೊಳಗೆ ಚರ್ಚೆ?

Views: 0
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ವೀರಶೈವ ಲಿಂಗಾಯತ ಮತ ಬ್ಯಾಂಕ್ ಗೆ ಕೈ ಹಾಕಿದ್ದು, ಕಾಂಗ್ರೆಸ್ ಇದೀಗ ಮತ್ತೆ ಅದನ್ನು ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವೀರಶೈವ ಲಿಂಗಾಯತ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂಬ ವಿಚಾರ ಮುನ್ನೆಲೆಗೆ ಬಂದಿದೆ.
ನಳಿನ್ ಕುಮಾರ್ ಕಟೀಲ್ ಅವರ ಅವಧಿ ಮುಗಿದು ಒಂದು ವರ್ಷ ಕಳೆದರೂ ಇನ್ನೂ ಹೊಸ ಅಧ್ಯಕ್ಷರ ನೇಮಕ ಆಗಿಲ್ಲ ಈ ಮಧ್ಯೆ ಸಿಟಿ ರವಿ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಮುಕ್ತಗೊಳಿಸಿದ ಬಳಿಕ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗಲಿದೆ ಎಂಬ ಮಾತು ಕೇಳಿಬಂದಿದ್ದು, ಆದರೆ ಇದೀಗ ಮತ್ತೆ ಲಿಂಗಾಯಿತ ಸಮುದಾಯದವರೇ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂಬ ವಿಚಾರ ಪಕ್ಷದ ರಾಜ್ಯ ವಲಯದಲ್ಲಿ ಚರ್ಚೆ ಜೋರಾಗಿದೆ.
ಕಳೆದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾತಿಗೂ ಮಣೆ ಹಾಕದೆ ಜಗದೀಶ್ ಶೆಟ್ಟರ್, ಲಕ್ಷಣ ಸವದಿ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಇದರಿಂದಾಗಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಕಾಂಗ್ರೆಸ್ಸಿಗೆ ಸೇರಿದ್ದರು. ಇದರಿಂದ ಬಿಜೆಪಿಯಲ್ಲಿ ಲಿಂಗಾಯಿತರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಸಂದೇಶ ಹೋಗಿ ಅದರ ಪರಿಣಾಮ ಚುನಾವಣಾ ಫಲಿತಾಂಶದ ಮೇಲೆ ಬಿದ್ದು ಹೀನಾಯ ಸೋಲುವಂತಾಯಿತು.
ಅಷ್ಟಕ್ಕೂ ಸುಮ್ಮನಾಗದ ಕಾಂಗ್ರೆಸ್ ಇದೀಗ ಜಗದೀಶ್ ಶೆಟ್ಟರ್ ಅವರನ್ನು ಮುಂದಿಟ್ಟುಕೊಂಡು ಲಿಂಗಾಯತ ಸಮುದಾಯದ ಮಾಜಿ ಶಾಸಕರು ಮುಖಂಡರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಆದ್ದರಿಂದ ರಾಜ್ಯಾಧ್ಯಕ್ಷ ಸ್ಥಾನವನ್ನು ಲಿಂಗಾಯತರಿಗೆ ನೀಡಬೇಕು ಎಂಬ ಬೇಡಿಕೆಗೆ ಕಾರಣವಾಗಿದೆ.
ಲಿಂಗಾಯತ ಮುಖಂಡರು ವಿಜಯೇಂದ್ರ ಹೆಸರು ಮುನ್ನೆಲೆಗೆ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಅವರ ಹೆಸರನ್ನು ಮುನ್ನೆಲೆಗೆ ತರಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಯಡಿಯೂರಪ್ಪ ಸಾಕಷ್ಟು ಪ್ರಯತ್ನ ಮಾಡಿದರೂ ಟಿಕೆಟ್ ಹಂಚಿಕೆಯಲ್ಲಿ ಅವರಿಗೆ ಬೆಲೆ ಸಿಗದ ಕಾರಣ ಲಿಂಗಾಯಿತರು ಬಿಜೆಪಿಯಿಂದ ದೂರವಾದರೂ ಆದ್ದರಿಂದ ಯಡಿಯೂರಪ್ಪ ಅವರನ್ನೇ ನಮ್ಮ ನಾಯಕ ಎಂದು ಲಿಂಗಾಯತರು ಪರಿಗಣಿಸಿರುವುದು ಸ್ವಷ್ಟವಾಗಿದೆ.
ಹೀಗಾಗಿ ಯಡಿಯೂರಪ್ಪ ಅವರಿಗೆ ನ್ಯಾಯ ಸಿಗಬೇಕಾದರೆ ಅವರ ಪುತ್ರ ವಿಜಯೇಂದ್ರ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು. ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಮಾತ್ರ ಪರಿಸ್ಥಿತಿ ಸುಧಾರಿಸಲು ಸಾಧ್ಯ ಎಂಬುದು ಲಿಂಗಾಯತ ಸಮುದಾಯದ ಹಲವು ಮುಖಂಡರ ಅಭಿಪ್ರಾಯವಾಗಿದೆ.
ಬೇರೆಯವರು ರಾಜ್ಯಾಧ್ಯಕ್ಷರಾದರೆ ಯಡಿಯೂರಪ್ಪ ಮೂಲೆಗುಂಪಾಗಿ ಲಿಂಗಾಯತರು ದೂರವಾಗಬಹುದುಈ ಎಲ್ಲಾ ಚರ್ಚೆಯಿಂದ ಬಿಜೆಪಿಗೆ ತಲೆನೋವಾಗಿ ಕಾಡಿದೆ.