ಇತರೆ

ಕಣ್ಣೂರು ವಿಮಾನ ನಿಲ್ದಾಣ;1.8 ಕೋ.ರೂ. ಅಕ್ರಮ ಚಿನ್ನ ಸಾಗಾಟ: ಇಬ್ಬರ ಸೆರೆ

Views: 0

ಕಾಸರಗೋಡು: ಡಿಆರ್‌ಐ ನೀಡಿದ ರಹಸ್ಯ ಮಾಹಿತಿಯಿಂತೆ ಕಣ್ಣೂರು ವಿಮಾನ ನಿಲ್ದಾಣದಿಂದ 1.8 ಕೋಟಿ ರೂ. ಮೌಲ್ಯದ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದೆ.

ಆರೋಪಿಗಳಾದ ಕಾಸರಗೋಡು ನಿವಾಸಿ ಅಬ್ದುಲ್‌ ನಿಶಾರ್‌, ಬಡಗರ ನಿವಾಸಿ ಮುಹಮ್ಮದ್‌ನನ್ನು ಬಂಧಿಸಲಾಗಿದೆ.

ಶಾರ್ಜಾದಿಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಬಂದಿಳಿದ ಅಬ್ದುಲ್‌ ನಿಶಾರ್‌ನಿಂದ 63.39 ಲಕ್ಷ ರೂ. ಮೌಲ್ಯದ 1080 ಗ್ರಾಂ ಚಿನ್ನವನ್ನು, ಅಬುಧಾಬಿಯಿಂದ ಬಂದ ಮಹಮೂದ್‌ನಿಂದ 37.49 ಲಕ್ಷ ರೂ. ಮೌಲ್ಯದ 739 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಬ್ಬರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

Related Articles

Back to top button