ರಾಜಕೀಯ

ಐದು ವರ್ಷ ನಾನೇ ಸಿಎಂ:ಸಿದ್ದರಾಮಯ್ಯ 

Views: 51

ಕನ್ನಡ ಕರಾವಳಿ ಸುದ್ದಿ: ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ಪದೇಪದೆ ಬರುವ ಮಾತುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ‘ಅಧಿಕೃತ’ವಾಗಿ ಉತ್ತರಿಸುವ ಮೂಲಕ ಪರೋಕ್ಷವಾಗಿ ರವಾನಿಸಿದ್ದಾರೆ. ಸಂದೇಶ

ಕೆಪಿಎಸ್‌ಸಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯ ನಡುವೆ ಬಿಜೆಪಿಯ ಕೆಲ ಶಾಸಕರು ನೀವೇ ಮುಖ್ಯಮಂತ್ರಿಯಾಗಿರುವಿರಾ ಎಂದು ಟಾಂಗ್ ಕೊಟ್ಟರು. ಇದಕ್ಕೆ ಸ್ಪಷ್ಟನೆ ನೀಡಿದ ಸಿಎಂ, ನಾನೇ ಸಿಎಂ ಆಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು. ನಾವು ಮುಂದಿನ ಬಾರಿಯೂ ಗೆದ್ದು ಬರುತ್ತೇವೆ. ಬಿಜೆಪಿಯವರು ಗೆಲ್ಲಲ್ಲ, ನಾವೇ ನೂರಕ್ಕೆ ನೂರು ಮತ್ತೆ ಗೆದ್ದು ಬರುತ್ತೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಆ‌ರ್. ಅಶೋಕ್, ನೀವು ಮೊದಲ ಸಲ ಸಿಎಂ ಆಗಿದ್ದಾಗ ‘ಏ.. ಅಶೋಕ ಬರೆದುಕೊಳ್ಳಪ್ಪ, ನಾನೇ ಪರ್ಮನೆಂಟು ಅಂದಿದ್ರಿ. ಆದರೆ ಹಾಗಂದವರು ಕಾಣೆಯಾಗಿ ಹೋದ್ರಿ, ಕಾಣದಂತೆ ಮಾಯವಾ ದನೋ ನಮ್ಮ ಶಿವಾ.. ಅಂತ. ಈಗ ಮತ್ತೆ ನಾನೇ ಬರ್ತೀನಿ ಅಂತಿದ್ದೀರಿ. ಹಾಗೆ ಹೇಳಿದ ಯಾರೂ ಸಿಎಂ ಸ್ಥಾನದಲ್ಲಿ ಉಳೀಲಿಲ್ಲ ಸರ್’ ಎಂದು ಕಾಲೆಳೆದರು.

ಸಿದ್ದರಾಮಯ್ಯ ಐದೂ ವರ್ಷ ಪೂರೈಸಲಿ ಅಂತಲೇ ನಾವು ಬಯಸೇವೆ. ಐದು ವರ್ಷ ಇವರ ಸರಕಾರ ಇದ್ದರೆ, ಅದೇ ಪುಣ್ಯ ಅಂತ ಅಶೋಕ್ ಟಾಂಗ್ ಕೊಟ್ಟರು. ಆಗ, ಈ ಐದು ವರ್ಷ ಅಲ್ಲರೀ, ಮತ್ತೆ ಮುಂದಿನ ಐದು ವರ್ಷವೂ ನಾವೇ ಬರ್ತೇವೆ ಅಂತ ಸಿದ್ದರಾಮಯ್ಯ ಟಕ್ಕರ್ ಕೊಟ್ಟರು. ಸಿಎಂ ಆಗಿ ನೀವೇ ಇರುತ್ತೀರಾ? ಎಂದು ಬಿಜೆಪಿಯ ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ, ಹೌದು ನಾನೇ ಇರ್ತೀನಿ ಅಂತ ಸಿದ್ದರಾಮಯ್ಯ ಕೌಂಟರ್ ಕೊಟ್ಟರು.

Related Articles

Back to top button