ಶಿಕ್ಷಣ
ಎಸ್ಸೆಸ್ಸೆಲ್ಸಿ ಪಲಿತಾಂಶದಲ್ಲಿ ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಶೈಕ್ಷಣಿಕ ವಲಯ ಪ್ರಥಮ ಸ್ಥಾನ ಗಳಿಸಿ, ಶೇ. 91.62 ಪಲಿತಾಂಶ ದಾಖಲಾಗಿದೆ.

Views: 0
ಕುಂದಾಪುರ :ಒಟ್ಟು 2,470 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 2,263 ವಿದ್ಯಾರ್ಥಿಗಳು ತೇಗ೯ಡೆಗೊಂಡಿದ್ದಾರೆ. ಇಲ್ಲಿನ ವೆಂಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾಥಿ೯ನಿ ಶ್ರೀ ಲಹರಿ ದೇವಾಡಿಗ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 11 ಶಾಲೆಗಳಿಗೆ ಶೇ. 100 ಪಲಿತಾಂಶ ಬಂದಿದೆ. ಕಂಡ್ಲೂರು ಅಂಬೇಡ್ಕರ್ ವಸತಿ ಶಾಲೆ, ಮೊರಾಜಿ೯ ವಸತಿ ಶಾಲೆ, ಇಂದಿರಾಗಾಂಧಿ ವಸತಿ ಶಾಲೆ, ಗಂಗೊಳ್ಳಿ ಸ್ಟೆಲ್ಲಾ ಮರೀಸ್, ಮದರ್ ಥೆರಸಾ ಶಂಕರನಾರಾಯಣ, ಹೋಲಿ ರೋಜರಿ ಕುಂದಾಪುರ, ಎಸ್. ವಿ. ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ, ವಿ. ಕೆ. ಆರ್. ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ, ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಸಿದ್ದಾಪುರ,ಡ್ಯುಯಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆ ಅಮಾಸೆಬೈಲು ಶೇ. 100 ಪಲಿತಾಂಶ ಬಂದಿದೆ ಎಂದು ಶಿಕ್ಷಣಾಧಿಕಾರಿ ಕಾಂತರಾಜು ಸಿ. ಎಸ್. ತಿಳಿಸಿದ್ದಾರೆ.