ಕರಾವಳಿ
ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಜಿ.ಜಿ.ಮೋಹನ್ ಹೃದಯಾಘಾತದಿಂದ ನಿಧನ

Views: 109
ಕುಂದಾಪುರ: ಕೊಲ್ಲೂರು ಸಮೀಪದ ಮುದೂರು- ಜಡ್ಕಲ್ ನಿವಾಸಿ ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಜಿ.ಜಿ.ಮೋಹನ್(52)ಅವರು ಫೆ.27 ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.
ಮೃತರ ಪತ್ನಿ, ಮೂಡುಬಿದಿರೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಪುತ್ರಿಯನ್ನು ಅಗಲಿದ್ದಾರೆ.
ಅವರಿಗೆ ಸೋಮವಾರ ಲಘುವಾದ ಎದೆ ನೋವು ಕಾಣಿಸಿಕೊಂಡಿದ್ದು,ಇಂದು ಬೆಳಿಗ್ಗೆ ಮತ್ತೆ ಪುನಃ ತೀವ್ರ ಸ್ವರೂಪದ ಎದೆ ನೋವಿನಿಂದ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಕಾಲೇಜಿನಲ್ಲಿ ಓದುತ್ತಿರುವಾಗಲೇ ಕುಂದಾಪುರದಲ್ಲಿ ಬಸ್ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದರು. ಕೇರಳ ಮೂಲ ನಿವಾಸಿಯಾಗಿದ್ದು, ಕುಟುಂಬ ಸಮೇತರಾಗಿ ಹಲವು ವರ್ಷಗಳಿಂದ ಮದೂರು -ಜಡ್ಕಲ್ ನಲ್ಲಿ ನೆಲೆಸಿದ್ದಾರೆ. .
ಮೃತದೇಹ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಬುಧವಾರ ಮುದೂರು- ಜಡ್ಕಲ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.