ರಾಜಕೀಯ
ಉತ್ತರ ಕನ್ನಡ ಅನಂತ ಕುಮಾರ್ ಬದಲು ಕಾಗೇರಿ, ಶೆಟ್ಟರ್, ಸುಧಾಕರಗೆ ಟಿಕೆಟ್, ಚಿತ್ರದುರ್ಗ ಕಗ್ಗಂಟು!

Views: 47
ಲೋಕಸಭೆ ಚುನಾವಣೆ ಬಿಜೆಪಿ ತನ್ನ ಐದನೇ ಪಟ್ಟಿಯನ್ನು ಪ್ರಕಟಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಬದಲು ವಿಶ್ವೇಶ್ವರ ಹೆಗಡೆ ಕಾಗೇರಿಗೆ ನೀಡಲಾಗಿದೆ.
ಬೆಳಗಾವಿ ಲೋಕಸಭೆಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಚಿಕ್ಕಬಳ್ಳಾಪುರದಿಂದ ಕೆ. ಸುಧಾಕರ್ ಟಿಕೆಟ್ ನೀಡಲಾಗಿದೆ. ಇನ್ನು ಚಿತ್ರದುರ್ಗ ಕ್ಷೇತ್ರದ ಕಗ್ಗಂಟಾಗಿದ್ದು ಟಿಕೆಟ್ ಘೋಷಣೆ ಮಾಡಿಲ್ಲ.
ಉತ್ತರ ಕನ್ನಡದಲ್ಲಿ ಆರು ಬಾರಿ ಪ್ರತಿನಿಧಿಸಿದ ಕೇಂದ್ರದಲ್ಲಿ ಸಚಿವರು ಆಗಿರುವ ಅನಂತ್ ಕುಮಾರ್ ಹೆಗಡೆಗೆ ಈ ಬಾರಿ ಟಿಕೆಟ್ ಕೈ ತಪ್ಪಿದೆ.ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಸಚಿವರಾಗಿ ವಿಧಾನಸಭಾ ಮಾಜಿ ಸಭಾಧ್ಯಕ್ಷರಾಗಿರುವ ಇದೇ ಮೊದಲ ಬಾರಿಗೆ ಕಾಗೇರಿ ಸ್ಪರ್ಧಿಸಲಿದ್ದಾರೆ.