ಕರಾವಳಿ

ಉಡುಪಿ ಸೀರೆ: ಕೈಮಗ್ಗ ನೇಯ್ಗೆ ತರಬೇತಿ ಕಾರ್ಯಾಗಾರಕ್ಕೆ ಅರ್ಜಿ ಆಹ್ವಾನ

Views: 4

ಭೌಗೋಳಿಕ ಮಾನ್ಯತೆ ಪಡೆದಿರುವ ಬಹು ಬೇಡಿಕೆಯ ಕೈಮಗ್ಗದ ‘ಉಡುಪಿ ಸೀರೆ’ ಗಳ ಉತ್ಪಾದನಾ ಕ್ಷೇತ್ರವನ್ನು ವಿಸ್ತರಿಸಲು 6 ತಿಂಗಳ ಕೈಮಗ್ಗದ ನೇಯ್ಗೆ ತರಬೇತಿ ಕಾರ್ಯಾಗಾರ ಅಕ್ಟೋಬರ್ 30ರಂದು ಉಡುಪಿಯಲ್ಲಿ ಆರಂಭವಾಗಲಿದೆ.

1) ಕೇವಲ 30 ಆಸಕ್ತರಿಗೆ ಮಾತ್ರ ಅವಕಾಶ. 

2) ಅಕ್ಟೋಬರ್ 25ನೇ ತಾರೀಖಿಗೆ ಮುಂಚಿತವಾಗಿ ಹೆಸರನ್ನು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದಲ್ಲಿ ನೋಂದಾಯಿಸಿಕೊಳ್ಳಬೇಕು. 

2) ಮಹಿಳೆಯರು ಹಾಗೂ ಕೈಮಗ್ಗದ ನೇಕಾರಿಕೆಯ ಹಿನ್ನೆಲೆ ಹೊಂದಿರುವವರಿಗೆ ಆದ್ಯತೆ.

3) ಶಿಬಿರಾರ್ಥಿಗಳಿಗೆ ಐದು ತಿಂಗಳು ಮಾಸಿಕ ತಲಾ ರೂ. 8,000/- ತರಬೇತಿ ವೇತನ ನೀಡಲಾಗುವುದು.

4) ಬೆಳಗ್ಗೆ ಮತ್ತು ಸಂಜೆ ಲಘು ಉಪಾಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಇರುವುದು.

5) ಆರು ತಿಂಗಳ ತರಬೇತಿಯ ಬಳಿಕ ಕಡ್ಡಾಯವಾಗಿ ಸ್ವಂತ ಕೈಮಗ್ಗದ ನೇಕಾರಿಕೆ ಆರಂಭಿಸಬೇಕು. ಸಕಲ ವ್ಯವಸ್ಥೆ ಮಾಡಿ ಕೊಡಲಾಗುವುದು.

ಕಾರ್ಯಾಗಾರವು ಉಡುಪಿ ಜಿಲ್ಲಾ ಪಂಚಾಯತ್, ಕೈಮಗ್ಗ ಮತ್ತು ಜವಳಿ ಇಲಾಖೆ, ನಬಾರ್ಡ್, ರೋಬೋ ಸೋಪ್ಟ್ ನ ಸಿ.ಎಸ್.ಆರ್ ಯೋಜನೆ, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ (ನಿ.) ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಇವರ ಸಹಭಾಗಿತ್ವದಲ್ಲಿ ಜರುಗಲಿದೆ.

ವಿವರಗಳಿಗೆ ಸಂಪರ್ಕಿಸಿ: ರತ್ನಾಕರ ಇಂದ್ರಾಳಿ (ಕಾರ್ಯಕ್ರಮ ಸಂಯೋಜಕರು) ಮೊಬೈಲ್: 9844993565

Related Articles

Back to top button