ಉಡುಪಿ ನಮಾಜ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವು

Views: 28
ಉಡುಪಿ : ಮಸೀದಿಗೆ ನಮಾಜ್ ಮಾಡಲು ಬಂದಿದ್ದ ವ್ಯಕ್ತಿಯೊಬ್ಬರು ನಮಾಜ್ ಮಾಡುತ್ತಾ ಕುಳಿತಲ್ಲೇ ಕುಸಿದು ಬಿದ್ದು ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ಮಸೀದಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.
ದೊಡ್ಡಣಗುಡ್ಡೆಯ ಕರಂಬಳ್ಳಿ ನಿವಾಸಿ ಮುಷ್ತಾಕ್ (55) ಅವರೇ ನಮಾಜ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡವರು. ಮುಷ್ತಾಕ್ ಅವರು ಶುಕ್ರವಾರ ಮಧ್ಯಾಹ್ನದ ಜುಮಾ ನಮಾಜ್‌ಗಾಗಿ ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ಮಸೀದಿಗೆ ಬಂದಿದ್ದರು. ಅವರು ಖುತ್ಬಾ ಕೇಳಲು ಕುಳಿತಿದ್ದಾಗ ಒಮ್ಮಿಂದೊಮ್ಮೆಗೇ ಏನೋ ಆದಂತಾಗಿ ಕುಳಿತದಲ್ಲೇ ಕುಸಿದು ಎದುರಿಗೆ ಬಿದ್ದರು.
ಅವರ ಜತೆಗೆ ನಮಾಜ್ ಮಾಡುತ್ತಿದ್ದವರಿಗೆ ಮೊದಲು ಏನಾಗುತ್ತಿದೆ ಎಂದು ಅರ್ಥವಾಗಲಿಲ್ಲ. ಅರಿವಾದ ಬಳಿಕ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಅವಿವಾಹಿತರಾಗಿದ್ದ ಮುಷ್ತಾಕ್ ಅವರ ಮೃತದೇಹದ ದಫನ ಕ್ರಿಯೆ ದೊಡ್ಡಣಗುಡ್ಡೆ ಮಸೀದಿಯಲ್ಲಿ ನಡೆಯಿತು.