ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಕಾಣಿಸಿದ ನಕ್ಸಲರ ಚಲನವಲನ? ಅರಣ್ಯದಲ್ಲಿ ಓಡಾಡಿದ ಆ ನಾಲ್ವರು ಯಾರು?

Views: 150
ಉಡುಪಿ ಭಾಗದಲ್ಲಿ ನಕ್ಸಲರ ಚಟುವಟಿಕೆಗಳು ಸ್ಥಗಿತಗೊಂಡು 10 ವರ್ಷ ಕಳೆಯಿತು. ಕೇರಳ ಭಾಗದಲ್ಲಿ ನಕ್ಸಲ್ ವಿರುದ್ಧದ ಕಾರ್ಯಾಚರಣೆ, ಎನ್‌ಕೌಂಟರ್‌ಗಳು ಹೆಚ್ಚಾಗಿದೆ. ಹೀಗಾಗಿ ನಕ್ಸಲರು ಮತ್ತೆ ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಕ್ಕೆ ಬಂದಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮುದೂರು, ಜಡ್ಕಲ್ ಹಾಗೂ ಬೆಳ್ಕಲ್ ಭಾಗದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಶುರುವಾಗಿದೆ. 4 ಮಂದಿ ಹಸಿರು ಬಣ್ಣದ ಯೂನಿಫಾರಂ ಮಾದರಿಯ ಉಡುಗೆ ತೊಟ್ಟ ಸಶಸ್ತ್ರಧಾರಿಗಳು ಅರಣ್ಯ ಭಾಗದಲ್ಲಿ ಅಡ್ಡಾಡಿದ್ದಾರೆ. ನಾಲ್ವರ ಪೈಕಿ, ಇಬ್ಬರು ಶಸ್ತ್ರ ಹೊಂದಿದ್ದು, ಇಲ್ಲಿನ ಜನರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ್ದಾರೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಇವರು ನಕ್ಸಲರೇ ಇರಬಹುದು ಎಂಬ ಅನುಮಾನವನ್ನು ಸ್ಥಳೀಯ ಕೆಲವು ಜನರು ವ್ಯಕ್ತಪಡಿಸಿದ್ದಾರೆ.
ದಶಕದ ಹಿಂದೆ ಫೆಬ್ರವರಿ 6 ರಂದು, ನಕ್ಸಲ್ ನಾಯಕ ಸಾಕೆತ್ ರಾಜನ್ ಎನ್‌ಕೌಂಟರ್‌ಗೆ ಬಲಿಯಾಗಿದ್ದ. ಇದೇ ದಿನದ ಆಸುಪಾಸು ಸಂಶಯಾಸ್ಪದ ಚಲನವಲನ ಕಂಡುಬಂದಿರುವುದು ವದಂತಿಗೆ ಪುಷ್ಟಿ ನೀಡುತ್ತಿದೆ. ಇನ್ನು ಉಡುಪಿಯಲ್ಲಿ ನಕ್ಸಲರ ಚಟುವಟಿಕೆಗಳನ್ನು ನೋಡೋದಾದ್ರೆ
ಕುಂದಾಪುರದ ಬಸ್ರಿ ಬೇರಿನಲ್ಲಿ ಮೊದಲ ಬಾರಿಗೆ ನಕ್ಸಲರು ಪ್ರತ್ಯಕ್ಷ
2003ರಲ್ಲಿ ಕಾರ್ಕಳದ ಈದುವಿನಲ್ಲಿ ಮೊದಲ ನಕ್ಸಲ್ ಎನ್‌ಕೌಂಟರ್
ಶಂಕಿತ ನಕ್ಸಲರಾದ ಪಾರ್ವತಿ ಮತ್ತು ಹಾಜಿಮಾ ಹತ್ಯೆ ಮಾಡಲಾಗಿತ್ತು
2005ರಲ್ಲಿ ದೇವರಬಾಳುನಲ್ಲಿ ಅಜಿತ್ ಕುಸುಬಿ ಮತ್ತು ಉಮೇಶ್ ಹತ್ಯೆ
2005 ಜುಲೈ 28ರಂದು ಹೆಬ್ರಿಯ ಮತ್ತಾವುನಲ್ಲಿ ನೆಲಬಾಂಬ್ ಸ್ಫೋಟ
2008 ಮೇ15 ಸೀತಾನದಿ ಭೋಜ ಶೆಟ್ಟಿ ಮತ್ತು ಸುರೇಶ್ ಶೆಟ್ಟಿ ಹತ್ಯೆ
2008 ಡಿಸೆಂಬರ್ 7ರಲ್ಲಿ ಹಳ್ಳಿಹೊಳೆ ರೈತನ ಹತ್ಯೆ ಮಾಡಿದ್ದ ನಕ್ಸಲರು
2010 ಮಾರ್ಚ್ 1ರಂದು ಶಂಕಿತ ನಕ್ಸಲ್ ವಸಂತ ಎಂಬಾತನ ಹತ್ಯೆ
2011 ಡಿ.29 ನಾಡ್ಪಾಲ್‌ನಲ್ಲಿ ಪೊಲೀಸ್ ಮಾಹಿತಿದಾರನ ಕೊಲೆ
ಒಂದು ಕಾಲದಲ್ಲಿ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ನಿರಂತರ ಕಾರ್ಯ ಚಟುವಟಿಕೆ ನಡೆಸುತ್ತಿದ್ದ ನಕ್ಸಲರು ಪೊಲೀಸರ ನಿದ್ದೆಗೆಡಿಸಿದ್ದರು. ಆದ್ರೆ ಉಡುಪಿ ಭಾಗದಲ್ಲಿ ನಕ್ಸಲರ ಚಟುವಟಿಕೆಗಳು ಸ್ಥಗಿತಗೊಂಡು 10 ವರ್ಷ ಕಳೆಯಿತು. ಕೇರಳ ಭಾಗದಲ್ಲಿ ನಕ್ಸಲ್ ವಿರುದ್ಧದ ಕಾರ್ಯಾಚರಣೆ, ಎನ್‌ಕೌಂಟರ್‌ಗಳು ಹೆಚ್ಚಾಗಿದೆ. ಹೀಗಾಗಿ ನಕ್ಸಲರು ಮತ್ತೆ ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಕ್ಕೆ ಬಂದಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಸದ್ಯ ಆ ನಾಲ್ವರು ನಕ್ಸಲರೇ ಇರಬಹುದು ಎಂಬ ಅನುಮಾನವನ್ನು ಸ್ಥಳೀಯ ಜನರು ವ್ಯಕ್ತಪಡಿಸಿದ್ದಾರೆ.