ಉಡುಪಿ ಜಿಲ್ಲಾಧಿಕಾರಿ, ಎಸ್ಪಿ ಸಮ್ಮುಖದಲ್ಲಿ ನಕ್ಸಲ್ ತೊಂಬಟ್ಟು ಲಕ್ಷ್ಮೀ ಶರಣಾಗತಿ

Views: 240
ಕನ್ನಡ ಕರಾವಳಿ ಸುದ್ದಿ: ನಕ್ಸಲ್ ನಾಯಕಿ ತೊಂಬಟ್ಟು ಲಕ್ಷ್ಮಿ ಇಂದು ರವಿವಾರ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಎಸ್ಪಿ ಡಾ.ಅರುಣ್ ಕುಮಾರ್ ಸಮ್ಮುಖದಲ್ಲಿ ಶರಣಾಗಿದ್ದಾರೆ.
ಮೂಲಸೌಲಭ್ಯಗಳ ಕೊರತೆ ಹಾಗೂ ಅರಣ್ಯ ಅಧಿಕಾರಿಗಳ ಕಿರುಕುಳ ವಿರೋಧಿಸಿ ನಡೆಯುತ್ತಿದ್ದ ಹೋರಾಟದಲ್ಲಿ ಭಾಗಿಯಾಗಿದ್ದ ಲಕ್ಷ್ಮಿ 2006 ರಿಂದ ಭೂಗತರಾಗಿದ್ದರು.
ಕುಂದಾಪುರ ತಾಲ್ಲೂಕಿನ ತೊಂಬಟ್ಟು ಇರ್ಕಿಗದ್ದೆ ನಿವಾಸಿಯಾಗಿರುವ ಲಕ್ಷ್ಮಿ ಸುಮಾರು 20 ವರ್ಷಗಳ ಬಳಿಕ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ.ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಲಕ್ಷ್ಮಿ ಅವರ ಸಹೋದರ ಸಹೋದರಿಯನ್ನು ಮನೆಗೆ ಕರೆದುಕೊಳ್ಳಲು ಸಂತೋಷವಾಗುತ್ತಿದೆ ಎಂದರು .
ಸಂಡೂರು ಪ್ರಾಜೆಕ್ಟ್ಗೆ ಕೆಲಸಕ್ಕೆಂದು ಹೋದ ಲಕ್ಷ್ಮಿ ಮತ್ತೆ ಮನೆಗೆ ಬರಲಿಲ್ಲ. ಮೂರು ದಿನಗಳವರೆಗೂ ನಾವು ಕಾದುನೋಡಿ ನಂತರ ಪೊಲೀಸರಿಗೆ ದೂರು ನೀಡಿದ್ದೆವು. ಆಕೆ ಬಗ್ಗೆ ತಿಳಿದುಕೊಳ್ಳಲು ಜ್ಯೋತಿಷ್ಯರ ಬಳಿ ಭವಿಷ್ಯ ಕೇಳಿದಾಗ ಆಕೆ ಸಂತೋಷವಾಗಿದ್ದಾಳೆ. ಚಿಂತೆ ಮಾಡಬೇಡಿ ಎಂದು ಹೇಳಿದ್ದರು.
ನಮಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ದೂರು ನೀಡಿದೆವು. ಇದಾದ ಬಳಿಕ ಸಮಸ್ಯೆ ಜಾಸ್ತಿಯಾಯಿತು. ಎಸ್ಬಿಎಫ್ ಹಾಗೂ ಇತರ ಪೊಲೀಸರು ಬಂದೂಕಿನಲ್ಲಿ ಸುಟ್ಟು ಹಾಕುವುದಾಗಿ ಬೆದರಿಸಿದ್ದರು. ನೆಮದಿಯಾಗಿರಲು ಬಿಡಲಿಲ್ಲ. ನಾವು ಎಲ್ಲವನ್ನೂ ಅನುಭವಿಸಬೇಕಾಯಿತು ಎಂದರು.
ಲಕ್ಷ್ಮಿ ಅವರ ಸಹೋದರಿ ಮಾತನಾಡಿ, ನಮ ತಂಗಿಯನ್ನು ನೋಡಿ 15 ವರ್ಷಗಳ ಮೇಲಾಯಿತು.ತಂದೆ ಸತ್ತಾಗ ಶವ ಸಂಸ್ಕಾರಕ್ಕೆ ಬರಬೇಕೆಂಬ ಆಸೆಯಿತ್ತು. ಆದರೆ ಪೊಲೀಸರು ಮನೆಯ ಸುತ್ತ ಕಾವಲಿದ್ದುದ್ದರಿಂದಾಗಿ ಬರಲು ಸಾಧ್ಯವಾಗಿರಲಿಲ್ಲ ಎಂದರು.