ರಾಜಕೀಯ

ಉಡುಪಿ ಚಿಕ್ಕಮಗಳೂರು ಶೋಭಾ ಕರಂದ್ಲಾಜೆ ಬದಲಿಗೆ ಹೊಸಮುಖಕ್ಕೆ ಟಿಕೆಟ್ ನೀಡುವಂತೆ  ಕೇಂದ್ರ ನಾಯಕರಿಗೆ ಪತ್ರ ಚಳುವಳಿ !

Views: 9

ಚಿಕ್ಕಮಗಳೂರು: ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಹೀಗಿರುವಾಗ ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ಟಿಕೆಟ್ ನೀಡದಂತೆ ಪತ್ರ ಚಳುವಳಿ ಶುರುವಾಗಿದೆ

ಪ್ರಧಾನಿ ನರೇಂದ್ರ ಮೋದಿ, ಜೆ ಪಿ ನಡ್ಡಾ, ಅಮಿತ್ ಷಾ ಗೆ ಪತ್ರ ಬರೆಯುವ ಮೂಲಕ ಅದರಲ್ಲಿ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡದಂತೆ ಒತ್ತಾಯಿಸಲಾಗಿದೆ. ಹೊಸಮುಖಕ್ಕೆ ಟಿಕೆಟ್ ನೀಡುವಂತೆ ಆಗ್ರಹಿಸಲಾಗಿದೆ. ಮುಂದಿನ ದಿನದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯಾಧ್ಯಕ್ಷರ ಭೇಟಿಗೂ ನಿರ್ಧಾರ ಮಾಡಿದ್ದಾರೆ.

ಶೋಭಾ ಕರಂದ್ಲಾಜೆಗೆ ಉಡುಪಿ ಚಿಕ್ಕಮಗಳೂರು ಲೋಕಾಸಭಾ ಕ್ಷೇತ್ರದಲ್ಲಿ ಎರಡು ಭಾರಿ ಆಯ್ಕೆಯಾಗಿದ್ದಾರೆ. ಆದರೀಗ ಅವರಿಗೆ ಬಿಜೆಪಿಯಲ್ಲಿಯೇ ವಿರೋಧ ವ್ಯಕ್ತವಾಗಿದೆ. 5 ಸಾವಿರಕ್ಕೂ ಹೆಚ್ಚು ಪತ್ರಗಳನ್ನ ಪೋಸ್ಟ್ ನಲ್ಲಿ ಕಳುಹಿಸುವ ಮೂಲಕ ಪ್ರಧಾನಿ ಮತ್ತು ಕೇಂದ್ರ ನಾಯಕರ ಬಳಿ ಮನವಿ‌‌ ಮಾಡಿದ್ದಾರೆ.

Related Articles

Back to top button