ರಾಜಕೀಯ

ಉಡುಪಿ:ಹಿರಿಯ ಕಾಂಗ್ರೆಸ್ ನಾಯಕಿ ಲೀನಾ ಮಥಾಯಸ್ ಅಫಘಾತದಲ್ಲಿ ಸಾವು 

Views: 80

ಕನ್ನಡ ಕರಾವಳಿ ಸುದ್ದಿ: ಹಿರಿಯ ಕಾಂಗ್ರೆಸ್ ನಾಯಕಿ ಲೀನಾ ಮಥಾಯಸ್ ಶಿರ್ವ ಅಫಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.

ಭಾನುವಾರ ಶಿರ್ವ ಇರ್ಮಿಚಿ ಚರ್ಚ್ ಬಳಿಯ ರೇಚಲ್ ರೆಸ್ಟರೋರೆಂಟ್ ಬಳಿ ನಿಂತಿದ್ದ ಲೀನಾ ಮಥಾಯಸ್ ಅವರಿಗೆ ಬೆಳ್ಮಣ್ ಕಡೆಯಿಂದ ಶಿರ್ವಕ್ಕೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು ಈ ವೇಳೆ ಅವರ ಸೊಂಟ ಹಾಗೂ ಕೈ ಮತ್ತು ತಲೆಗೆ ರಕ್ತಸ್ರಾವವಾಗಿದ್ದು, ಕೂಡಲೇ ಅವರನ್ನು ಶಿರ್ವ ಪ್ರಾಥಮಿಕ ಕೇಂದ್ರಕ್ಕೆ ಸಾಗಿಸಿದ್ದು ಅಲ್ಲಿನ ವೈದ್ಯಾಧಿಕಾರಿಯವರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆ ಸಲುವಾಗಿ ಗಾಯಾಳುವನ್ನು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೀನಾ ಮಥಾಯಸ್ ಅವರು ಶಿರ್ವ ಭಾಗದ ಹಿರಿಯ, ಪ್ರಭಾವಿ ಕಾಂಗ್ರೆಸ್ ನಾಯಕಿಯಾಗಿದ್ದು ಉಡುಪಿ ಜಿಲ್ಲಾ ಪರಿಷತ್ನ ಮಾಜಿ ಉಪಾಧ್ಯಕ್ಷರಾಗಿ, ಶಿರ್ವ ಗ್ರಾಮ ಪಂಚಾಯತ್ ನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿ. ಆಸ್ಕರ್ ಫೆರ್ನಾಂಡಿಸ್ ಅವರ ನಿಕಟವರ್ತಿಯಾಗಿದ್ದ ಅವರು ಪಕ್ಷದಲ್ಲಿ ಸಕ್ರಿಯರಾಗಿದ್ದರು.

Related Articles

Back to top button