ಉಡುಪಿಯ ಕಾಪುವಿನಲ್ಲಿ “ಅರಬ್ಬರ ನಾಡಿನಲ್ಲಿ ಕನ್ನಡಿಗರು” ಪುಸ್ತಕ ಬಿಡುಗಡೆ ಮತ್ತು ಅನಿವಾಸಿಗರ ಚಿಂತನ ಮಂಥನ ಕಾರ್ಯಕ್ರಮ

Views: 90
ಉಡುಪಿ: ಸಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರತಿಷ್ಠಾನ ವತಿಯಿಂದ ನಡೆದ ಸಂಸ್ಕೃತಿ ಸಂಚಯನದಲ್ಲಿ ಅನಿವಾಸಿಗರು ಎಂಬ ಶೀರ್ಷಿಕೆಯಡಿ ಚಿಂತನ ಮಂಥನ ಕಾರ್ಯಕ್ರಮ ಫೆಬ್ರವರಿ 3ರಂದು ಉಡುಪಿ ಕಾಪುನಲ್ಲಿ ಜರುಗಿತು.
ಅನಿವಾಸಿ ಪ್ರವಾಸಿಗರ ಸಂವಾದ ಹಾಗೂ ಪಿ.ಎಸ್ ರಂಗನಾಥ್ ಸಂಪಾದಕತ್ವದ ಅರಬ್ಬರ ನಾಡಿನಲ್ಲಿ ಕನ್ನಡಿಗರು ಎಂಬ ಪುಸ್ತಕವನ್ನು ಬೆಂಗಳೂರಿನಲ್ಲಿ ಜನವರಿ 14 ರಂದು ಬಿಡುಗಡೆ ಮಾಡಲಾಗಿತ್ತು. ನಂತರ ಕರಾವಳಿಯಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮದಲ್ಲಿ ಬಿಡುಗಡೆ ಗೊಳಿಸಲಾಯಿತು.
ರಾಜಕೀಯ ಮತ್ತು ಸಮಾಜಿಕ ಮುಂದಾಳು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗೀತಾಂಜಲಿ ಸುವರ್ಣ ಮಾತನಾಡುತ್ತಾ ಕರಾವಳಿಯ ಕರ್ನಾಟಕದ ಉಭಯ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನ ಗಲ್ಫ್ ಹಾಗೂ ವಿದೇಶದಲ್ಲಿ ನೆಲೆ ನಿಂತು ತನ್ಮೂಲಕ ತನ್ನ ಹುಟ್ಟೂರಿಗೆ ಸೇವೆಯನ್ನು ಮಾಡುತ್ತಿದ್ದು ಅವರಿಗೂ ಕೂಡಾ ನೆರೆಯ ಕೇರಳ ರಾಜ್ಯ ಸಹಕರಿಸುವಂತೆ ನಮ್ಮಲ್ಲಿಯು ಸಂಪೂರ್ಣ ಸಹಕಾರ ಮುಂದಿನ ದಿನಗಳಲ್ಲಿ ಸರ್ಕಾರದಿಂದ ದೊರೆಯಬೇಕು ಎಂದು ಹೇಳಿದರು.
ಅನಿವಾಸಿನಾಗಿ ಎರಡು ದಶಕಗಳ ಕಾಲ ಅಲ್ಲಿನ ಕೆಲ ವಿಚಾರಗಳನ್ನು ಶ್ರೀ ಶಿವಾನಂದ ಕೋಟ್ಯಾನ್ ಹಂಚಿಕೊಂಡರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದ ಶ್ರೀ ರಾಜ ಕಟಪಾಡಿ ಮಾತನಾಡಿ ತಾನು ಭೇಟಿ ಮಾಡಿದ ತನ್ನ ಅನುಭವ ಹಾಗೂ ಸಾಂಸ್ಕೃತಿಕವಾಗಿ ಅನಿವಾಸಿಗರು ನಮ್ಮೂರಿನ ಕಲೆ, ಸಾಹಿತ್ಯ, ಜಾನಪದ ಇತ್ಯಾದಿಗಳನ್ನು ಅಯೋಜನೆ ಅಲ್ಲದೇ ಸಹಾಯ ಸಹಕಾರವನ್ನು ಅನಿವಾಸಿಗರು ಮಾಡುವರು ಎನ್ನುದನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಅನಿವಾಸಿಗರು ಹಾಗೂ ಊರಿನ ಪ್ರಮುಖರು ಪಾಲ್ಗೊಂಡಿದ್ದರು.