ರಾಜಕೀಯ
ಉಡುಪಿ:ಪ್ರಮೋದ್ ಮಧ್ವರಾಜ್‌ಗೆ ಬಿಜೆಪಿ ಟಿಕೆಟ್‌ಗಾಗಿ ಆಗ್ರಹಿಸಿ ನಾಳೆ ಬೈಕ್ ರ‍್ಯಾಲಿ

Views: 89
ಉಡುಪಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಯಲು ಮಾಜಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್‌ಗೆ ಬಿಜೆಪಿ ಟಿಕೆಟ್‌ಗಾಗಿ ಆಗ್ರಹಿಸಿ ಮೀನುಗಾರ ಸಮುದಾಯದ ಮುಖಂಡರ ಗುಂಪು ಮಲ್ಪೆ ಏಳೂರು ಮೊಗವೀರ ಭವನದಿಂದ ಜಿಲ್ಲಾ ಬಿಜೆಪಿ ಕಚೇರಿಯವರೆಗೂ ನಾಳೆ ಬೈಕ್ ರ‍್ಯಾಲಿ ನಡೆಯಲಿದೆ.
ಮಧ್ಯಾಹ್ನ 3 ಗಂಟೆಗೆ ಮಲ್ಪೆ ಏಳೂರು ಮೊಗವೀರ ಭವನದಿಂದ ಬೈಕ್ ರ‍್ಯಾಲಿ ಆರಂಭವಾಗುವ ನಿರೀಕ್ಷೆ ಇದೆ. ಹಾಲಿ ಸಂಸದೆ ಶೋಭಾ ಕರಂದ್ಲಾಜೆ (ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ) ಕ್ರಿಯಾಶೀಲರಾಗಿಲ್ಲ ಎಂದು ಜನವರಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದ ಅಖಿಲ ಭಾರತ ಮೀನುಗಾರರ ಸಂಘದ ಕಾರ್ಯದರ್ಶಿ ಕಿಶೋರ್ ಡಿ ಸುವರ್ಣ ನೇತೃತ್ವದಲ್ಲಿ ಈ ರ‍್ಯಾಲಿ ಆಯೋಜಿಸಲಾಗಿದೆ.
ಬಿಜೆಪಿಯ ಉಡುಪಿ ಸಿಎಂಸಿ ಕೌನ್ಸಿಲರ್‌ಗಳಾದ ಸುಂದರ್ ಕಲ್ಮಾಡಿ, ಯೋಗೀಶ್ ಸಾಲಿಯಾನ್ ಮತ್ತು ಇತರ ಮುಖಂಡರು ಭಾಗವಹಿಸಲಿದ್ದು, ಸುಮಾರು 200 ರಿಂದ 250 ಬೈಕ್ ಸವಾರರು ರ‍್ಯಾಲಿ ಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.