ಜನಮನ

ಉಗ್ರರ ಗುಂಡೇಟಿಗೆ ಬಲಿಯಾದ ಮೇಜರ್ ಹುತಾತ್ಮ, 20 ವರ್ಷದ ನಂತರ…ಆತನ ಮಗಳು ಸೇನಾ ಕರ್ತವ್ಯಕ್ಕೆ ..!

ಇದು ದೇಶಪ್ರೇಮದ ರೋಚಕ ಕಥೆ..ಉಗ್ರರ ಗುಂಡೇಟಿಗೆ ಬಲಿಯಾದ ಮೇಜರ್ ಹುತಾತ್ಮ, 20 ವರ್ಷದ ನಂತರ...ಆತನ ಮಗಳು ಸೇನಾ ಸಮವಸ್ತ್ರ ತೊಟ್ಟು ಕರ್ತವ್ಯಕ್ಕೆ ಹಾಜರಾಗಿದ್ದಾಳೆ...

Views: 96

ಲೆಫ್ಟಿನೆಂಟ್ ಇನಾಯತ್ ವಾಟ್ಸ್ ಅವರು ಚಂಡೀಗಢ ಮೂಲದವರು. ಈಕೆಯ ತಂದೆ ಮೇಜರ್ ನವನೀತ್ ವಾಟ್ಸ್ 2003ರಲ್ಲಿ ಭಾರತೀಯ ಸೇನೆಯಲ್ಲಿ ಹೋರಾಡುತ್ತಿದ್ದಾಗ ವೀರ ಮರಣವನ್ನಪ್ಪಿದ್ದರು. ಆಗ ಇನಾಯತ್ ವಾಟ್ಸ್‌ಗೆ ಕೇವಲ ಎರಡೂವರೆ ವರ್ಷ ವಯಸ್ಸು. ಅಂದಿನಿಂದ ತನ್ನ ತಂದೆಯನ್ನೇ ಹೀರೋ ಎಂದು ಭಾವಿಸಿದ್ದಳು. ಕಷ್ಟಪಟ್ಟು ಓದಿ ಕೊನೆಗೂ ಸೇನಾ ಸಮವಸ್ತ್ರ ತೊಟ್ಟು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಲೆಫ್ಟಿನೆಂಟ್ ಇನಾಯತ್ ವಾಟ್ಸ್ ಅವರು ಮೂರನೇ ಗೂರ್ಖಾ ರೈಫಲ್ಸ್‌ನ ನಾಲ್ಕನೇ ಬೆಟಾಲಿಯನ್‌ಗೆ ನಿಯೋಜನೆ ಆಗಿದ್ದಾರೆ.

ನವೆಂಬರ್ 20, 2003ರಂದು ಲೆಫ್ಟಿನೆಂಟ್ ಇನಾಯತ್ ತಂದೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಗೆ ತೆರಳಿದ್ದರು. 32 ರಾಷ್ಟ್ರೀಯ ರೈಫಲ್ಸ್‌ನಲ್ಲಿ ಸೇವೆ ಮಾಡುತ್ತಿದ್ದಾಗ ಶ್ರೀನಗರದ ಟೆಲಿಕಾಂ ಕಟ್ಟಡಕ್ಕೆ ಉಗ್ರರು ನುಗ್ಗಿದ್ದರು. ಉಗ್ರರ ವಿರುದ್ಧ ಹೋರಾಡುವಾಗ ನವನೀತ್ ವಾಟ್ಸ್ ಅವರಿಗೆ ಗಂಭೀರ ಗಾಯಗಳಾಗಿತ್ತು. ಮೇಜರ್ ನವನೀತ್ ವಾಟ್ಸ್ ಅವರಿಗೆ ಸೇನಾ ಪದಕ ನೀಡಿ ಗೌರವಿಸಲಾಗಿದೆ.

ಮೇಜರ್ ನವನೀತ್ ವಾಟ್ಸ್ ಹುತಾತ್ಮರಾದ ಮೇಲೆ ಮಗಳ ಜವಾಬ್ದಾರಿ ನವನೀತ್ ಅವರ ಪತ್ನಿ ಶಿವಾನಿ ವಾಟ್ಸ್‌ ಅವರ ಹೆಗಲೇರಿತ್ತು. ಎರಡೂವರೆ ವರ್ಷದ ಮಗಳನ್ನು ಸೈನ್ಯಕ್ಕೆ ಸೇರಿಸಬೇಕು ಎಂದು ಪಣ ತೊಟ್ಟ ತಾಯಿ 20 ವರ್ಷ ಶ್ರಮ ಪಟ್ಟಿದ್ದಾರೆ. ಲೆಫ್ಟಿನೆಂಟ್ ಇನಾಯತ್ ಚೆನ್ನೈನಲ್ಲಿ ನಡೆದ ತರಬೇತಿ ಅಕಾಡೆಮಿಯಲ್ಲಿ ಸೇನೆಗೆ ಆಯ್ಕೆಯಾಗಿದ್ದಾಳೆ.ಇವಳ ದೇಶ ಪ್ರೇಮಕ್ಕೆ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

 

Related Articles

Back to top button